ಮಂಗಳೂರು : ಅಕ್ರಮವಾಗಿ ನವಜಾತ ಶಿಶು ಮಾರಾಟ ಮಾಡಿದ್ದ ಮಂಗಳೂರು ಮೂಲದ ವೈದ್ಯರು ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಂಗಳೂರು ಮೂಲದ ವೈದ್ಯ ಡಾ.ಸೋಮೇಶ್ ಸೋಲೋಮನ್, ಬ್ರೋಕರ್ ಮಹಿಳೆ ವಿಜಯಲಕ್ಷ್ಮಿ ಹಾಗೂ ಆರೋಪಿ ನವನೀತ್ ನಾರಾಯಣ ಎಂದು ಗುರುತಿಸಲಾಗಿದೆ.
ನವನೀತ್ ನಾರಾಯಣ ಎಂಬಾತ ಮಾನಸಿಕ ಅಸ್ವಸ್ಥ ಯುವತಿ ಮೇಲೆ ಅತ್ಯಾಚಾರ ಎಸಗಿದ್ದನು. ಸಂತ್ರಸ್ತೆಗೆ ಮಗು ಹುಟ್ಟಿದ ನಂತರ ಉಡುಪಿ ಮೂಲದ ದಂಪತಿಗಳು ಆಸ್ಪತ್ರೆಯಿಂದಲೇ ಮಗುವನ್ನು ಖರೀದಿಸಿದ್ದರು. ವಿಜಯಲಕ್ಷ್ಮಿ ಎಂಬ ಮಹಿಳೆ ಮಧ್ಯವಸ್ಥಿಕೆ ವಹಿಸಿ 4 ಲಕ್ಷಕ್ಕೆ ಮಗು ಮಾರಾಟ ಮಾಡಿದ್ದಾರೆ. ಇರದಲ್ಲಿ ವೈದ್ಯ ಡಾ.ಸೋಮೇಶ್ ಸೋಲೋಮನ್ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗುದೆ. ಈ ಸಂಬಂಧ ಉಡುಪಿಯ ಶಿರ್ವ ಠಾಣೆ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.