BIG NEWS : ಸ್ವಯಂಘೋಷಿತ ಆರ್ಥಿಕ ತಜ್ಞ : ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ಧಾಳಿ

ಸ್ವಯಂಘೋಷಿತ ಆರ್ಥಿಕ ತಜ್ಞ ಸಿಎಂ ಸಿದ್ದರಾಮಯ್ಯ ಅವರೆ, ಕೊನೆಗೂ ಕುಂಟುತ್ತಾ, ತೆವಳುತ್ತಾ, ಕುರ್ಚಿ ಯಾವಾಗ ಬೀಳುತ್ತದೆ ಎಂಬ ಭಯದ ನಡುವೆಯೇ ಎರಡು ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ನಿಭಾಯಿಸಿದ್ದೀರಿ. ನಿಮ್ಮ ಆಡಳಿತಾವಧಿಯ ಈ ಎರಡು ವರ್ಷ ನಮ್ಮ ಏಳು ಕೋಟಿ ಕನ್ನಡಿಗರ ಪಾಲಿಗೆ ಖಂಡಿತವಾಗಿಯೂ ಒಂದು ದುಃಸ್ವಪ್ನ ಎಂದು ಬಿಜೆಪಿ ಟ್ವೀಟ್ ನಲ್ಲಿ ಕಿಡಿಕಾರಿದೆ.

ಕರ್ನಾಟಕದ ಇತಿಹಾಸ ಕಂಡ ಅತ್ಯಂತ ಭ್ರಷ್ಟ, ಭಂಡ ಹಾಗೂ ಅರಾಜಕತೆಯನ್ನು ಪೋಷಿಸುವ ನಿರ್ಲಜ್ಜ ಸರ್ಕಾರಕ್ಕೆ ಎರಡು ವರ್ಷ ತುಂಬಿದೆ ಎಂದು ಹೇಳಿದರೆ ಅದು ಖಂಡಿತ ಅತಿಶಯೋಕ್ತಿಯಲ್ಲ!!

ನಿಮ್ಮ ಸರ್ಕಾರ ಯಾವ ಸಾಧನೆ ಮಾಡಿದೆ ಎಂದು ನಿಮ್ಮ ಮನಸಾಕ್ಷಿಯನ್ನು ನೀವೊಮ್ಮೆ ಕೇಳಿಕೊಂಡರೆ ನಿಮ್ಮ ಮನಸಾಕ್ಷಿ “ಏನಿಲ್ಲಾ-ಏನಿಲ್ಲಾ” ಎನ್ನುತ್ತದೆ. ಯಾವ ಸಾಧನೆಯನ್ನು ಮಾಡದೆ ಕೇವಲ ಭ್ರಷ್ಟಾಚಾರ ಹಾಗೂ ಅತಿಯಾದ ಓಲೈಕೆ ರಾಜಕಾರಣವನ್ನು ಮಾಡಿದ್ದೆ ನೀವು ಸಾಧನೆ ಎಂದು ಭಾವಿಸಿದಂತಿದೆ!!ಬಿಡುವಾಗಿದ್ದಾಗ ಒಮ್ಮೆ ಚುನಾವಣೆಗೂ ಮುನ್ನ ನೀವು ಕನ್ನಡಿಗರ ತಲೆ ಮೇಲೆ ಹೇಗೆ ಮಕ್ಮಲ್ ಟೋಪಿ ಹಾಕಿ, ರಂಗ್ ಬಿರಂಗಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರಿ ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ.

ಹತ್ತು ಕೆಜಿ ಅಕ್ಕಿ ಬೇಕೋ..ಬೇಡ್ವೋ..ಎಂದು ಮೂಗು ಹಾಗೂ ಕಣ್ಣು ಅರಳಿಸಿ, ಮೇಜು ಕುಟ್ಟಿ ನೀವು ಮಾಡಿದ ಘೋಷಣೆ ಕೇವಲ ಭಾಷಣಕ್ಕಷ್ಟೇ ಸೀಮಿತವಾಯ್ತು. ಇದುವರೆಗೂ ಕರ್ನಾಟಕದ ಒಂದೇ ಒಂದು ಕುಟುಂಬಕ್ಕೆ ನೀವು 10 ಕೆಜಿ ಅಕ್ಕಿಯನ್ನು ನೀಡಿಯೇ ಇಲ್ಲ.

ಪ್ರತಿ ಮನೆ ಯಜಮಾನಿಗೆ ಪ್ರತಿ ತಿಂಗಳು ₹2000 ಹಾಕುತ್ತೇವೆಂದು ಹೇಳಿದ್ದ ನೀವು, ಈಗ ನಾವು ಹಾಗೆ ಹೇಳಿಯೇ ಇಲ್ಲ ಎಂದು ವಾದಿಸುತ್ತಿರುವುದು ನಿಮ್ಮ ಗೋಸುಂಬೆ ಬುದ್ದಿಗೆ ಸಾಕ್ಷಿ!!ಕಾಕಾ ಪಾಟೀಲ್ ಗೂ ಫ್ರೀ, ಮಾದೇವಪ್ಪಂಗೂ ಫ್ರೀ ಎಂದ ಗೃಹಜ್ಯೋತಿ ಬೆಳಗಿದ್ದಕ್ಕಿಂತ ಆರಿದ್ದೇ ಜಾಸ್ತಿ!! ವಿದ್ಯುತ್ ದರವನ್ನು ಏರಿಸಿ ಜನರಿಂದ ಬೇಕಾಬಿಟ್ಟಿಯಾಗಿ ವಸೂಲಿ ಮಾಡಿದ್ದು, ಹಾಗೂ ಒಂದಷ್ಟು ಪ್ರತಿಷ್ಟಿತ ಕಂಪನಿಗಳನ್ನು ಕರ್ನಾಟಕದಿಂದ ಗುಳೇ ಎಬ್ಬಿಸಿದ್ದು ನಿಮ್ಮ ಅಸಲಿ ಸಾಧನೆ.

ತವರು ಮನೆಗೆ ಹೋಗುವಾಗ, ನೆಂಟರ ಮನೆಗೆ ಹೋಗುವಾಗ ನೀವ್ಯಾರೂ ಬಸ್ ಟಿಕೇಟ್ ತಗಣಂಗಿಲ್ಲ” ಎಂದು ಮಹಿಳೆಯರಿಗೆ ಹೇಳಿ ರೂಟ್ ಮೇಲಿನ ಬಸ್ಸುಗಳನ್ನೆ ನಿಲ್ಲಿಸಿದ ಜೊತೆಗೆ ಗಂಡಸರ ಜೇಬಿನಿಂದ 15% ಹೆಚ್ಚುವರಿ ಹಣ ಪೀಕುತ್ತಿರುವುದು ನಿಮ್ಮ ಸಾಧನೆ!!

ನಿಮಗೆ ಜೈಕಾರ ಹಾಕುವ ನಿರುದ್ಯೋಗಿ ವಂದಿಮಾಗಧರಿಗೆ ಗ್ಯಾರಂಟಿ ಅನುಷ್ಟಾನ ಸಮಿತಿ ಹೆಸರಿನಲ್ಲಿ ಮಾಸಿಕ ಭತ್ಯೆ ನೀಡಿದ್ದಿರಿ, ಆದರೆ ಚುನಾವಣೆಯಲ್ಲಿ ಹೇಳಿದಂತೆ ನಿರುದ್ಯೋಗಿ ಪದವೀಧರರಿಗೆ ಇದುವರೆಗೂ ಯುವನಿಧಿ ಯೋಜನೆ ಜಾರಿಯಾಗಿಲ್ಲ, ಇದು ನಿಮ್ಮ ಅಸಲಿ ಸಾಧನೆ!!

ಸಾವಿರಾರು ಬಾಣಂತಿಯರ ಸಾವಿಗೆ ಕಾರಣವಾಗಿ ಸಾವಿರಾರು ಕಂದಮ್ಮಗಳನ್ನು ಅನಾಥರನ್ನಾಗಿಸಿದ್ದು ನಿಮ್ಮ ಸಾಧನೆ. ಕಾನೂನು & ಸುವ್ಯವಸ್ಥೆಯನ್ನು ಹಳ್ಳ ಹಿಡಿಸಿ, ಕರ್ನಾಟಕದಲ್ಲಿ ಅರಾಜಕತೆಯನ್ನು ರಾಜಾರೋಷವಾಗಿ ತಿರುಗಾಡಲು ಬಿಟ್ಟಿದ್ದು ನಿಮ್ಮ ಸಾಧನೆ.

ಓಲೈಕೆ ರಾಜಕಾರಣದ ಟೋಪಿಯನ್ನು ತಲೆಗೆ ಸದಾ ಹಾಕಿಕೊಂಡ ಪರಿಣಾಮ ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್ ಕೇಳಿ ಬಂದಿತು, ಅಮಾಯಕ ಹಿಂದೂ ಯುವಕರ ಬಲಿಯಾಯಿತು.ದಲಿತ ಮಹಿಳೆಯರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದು, ಮಹರ್ಷಿ ವಾಲ್ಮೀಕಿ ನಿಗಮದ ಹಣವನ್ನು ಲೂಟಿ ಮಾಡಿ ತೆಲಂಗಾಣ ಚುನಾವಣೆಗೆ ಕಳಿಸಿದ್ದು, ದಲಿತರ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದು, ಮುಡಾದಲ್ಲಿ ಬಡವರ ಸೈಟು ಕಬಳಿಸಿದ್ದು ಇದೇ ನಿಮ್ಮ ಸಾಧನೆ.

ಸದಾ ಹಿಂದೂಗಳ ಮೇಲೆ ದ್ವೇಷ ಕಾರುವುದೆ ನಿಮ್ಮ ಅಸಲಿ ಸರ್ವಜನಾಂಗದ ಶಾಂತಿಯ ತೋಟ ಎಂಬುದು ಈಗ ಜಗಜ್ಜಾಹೀರಾಗಿದೆ. ಎಲ್ಲಾ ವಲಯಗಳ ಬೆಲೆಯನ್ನು ಏರಿಕೆ ಮಾಡಿ, ಅಕ್ಷರಶಃ ಕನ್ನಡಿಗರ ರಕ್ತ ಹೀರುತ್ತಿದ್ದೀರಿ. ಸಿದ್ದರಾಮಯ್ಯ ಅವರೆ ನೀವು ಮುಖ್ಯಮಂತ್ರಿಯಾಗಿ ಇನ್ನೆಷ್ಟು ದಿನ ಮುಂದುವರೆಯುತ್ತಿರೋ ಅದು ನಿಮ್ಮ ಪಕ್ಷಕ್ಕೆ ಬಿಟ್ಟಿದ್ದು!!ಆದರೆ ಮುಖ್ಯಮಂತ್ರಿ ಕುರ್ಚಿಯಿಂದ ಇಳಿಯುವ ಮುನ್ನವಾದರೂ “ಬದುಕು ನಶ್ವರ” ಎಂದು ಕೇವಲ ಭಾಷಣ ಮಾಡುವುದನ್ನು ಬಿಟ್ಟು ಜನರಿಗೆ ಉಪಯೋಗವಾಗುವ ಒಂದಾದರೂ ಕೆಲಸವನ್ನು ಮಾಡಿ ಎಂದು ಕಿಡಿಕಾರಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read