ಪ್ರಿಯತಮನ ಭೇಟಿಗಾಗಿ ಅಕ್ರಮವಾಗಿ ಗಡಿ ದಾಟಿ ಬಂದಿದ್ದ ಮತ್ತೊಂದು ಪ್ರಕರಣ ಬಹಿರಂಗ…!

Girl came to Siliguri from Bangladesh illegally for her lover like Seema  Haider moved from Pakistan to Greater Noida for Sachin lcln

ಕೋಲ್ಕತ್ತಾ: ಇತ್ತೀಚೆಗೆ ಯುವತಿಯೊಬ್ಬಳು ತನ್ನ ಪ್ರಿಯಕರನ ಭೇಟಿಗಾಗಿ ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ಅಕ್ರಮವಾಗಿ ಪ್ರವೇಶಿಸಿದ್ದ ಘಟನೆ ಮಾಸುವ ಮುನ್ನವೇ ಅಂತದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.  ಬಂದಿದ್ದು, ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಬಾಂಗ್ಲಾದ ಜೆಸ್ಸೋರ್ ಮೂಲದ ಯುವತಿ ಸಪಾಲಾ ಅಕ್ತರ್ ಗೆ ಸಾಮಾಜಿಕ ಜಾಲತಾಣಗಳ ಮೂಲಕ ಯುವಕನೊಬ್ಬನ ಪರಿಚಯವಾಗಿ, ಪ್ರೇಮಾಂಕುರವಾಗಿದೆ. ಪ್ರಿಯಕರನ ಭೇಟಿಗಾಗಿ ಯುವತಿ ಸಪಾಲಾ ಅಕ್ತರ್, ಭಾರತದ ಅಂತರಾಷ್ಟ್ರೀಯ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಿದ್ದಾಳೆ. ಕಳೆದ ಎರಡೂವರೆ ತಿಂಗಳ ಹಿಂದೆಯೇ ಯುವತಿ ಅಕ್ರಮವಾಗಿ ಭಾರತಕ್ಕೆ ಬಂದಿದ್ದು, ಪ್ರಧಾನನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಿಯಕರನ ಭೇಟಿಯಾಗಿದ್ದಾಳೆ. ಇಬ್ಬರು ಕೆಲ ದಿನಗಳ ಕಾಲ ಜೊತೆಯಾಗಿಯೇ ಇದ್ದರು. ಯುವತಿ ಜೀವನೋಪಾಯಕ್ಕಾಗಿ ಬ್ಯೂಟಿ ಪಾರ್ಲರ್ ಒಂದರಲ್ಲಿ ಕೆಲಸಕ್ಕೆ ಸೇರಿದ್ದಳು.

ಈ ಸಂದರ್ಭದಲ್ಲಿ ತನ್ನ ಪ್ರಿಯಕರ ತನಗೆ ಪ್ರೀತಿಯ ಹೆಸರಲ್ಲಿ ಮೋಸ ಮಾಡಿರುವುದು ಗೊತ್ತಾಗಿದೆ. ತನ್ನನ್ನು ನೇಪಾಳಕ್ಕೆ ಮಾರಾಟ ಮಾಡಲು ಯತ್ನಿಸಿರುವ ವಿಷಯ ತಿಳಿದಿದೆ. ಆತನಿಂದ ತಪ್ಪಿಸಿಕೊಳ್ಳಲು ಯುವತಿ ಯತ್ನಿಸಿದ್ದಾಳೆ. ರಾತ್ರಿ ಸಿಲಿಗುರಿಯಲ್ಲಿ ಯುವತಿ ಸುತ್ತಾಡುತ್ತಿದ್ದಾಗ ಸ್ವಯಂಸೇವಾ ಸಂಸ್ಥೆಯೊಂದರ ಸೇವಕರುವಿಚಾರಿಸಿದ್ದಾರೆ. ಈ ವೇಳೆ ಯುವತಿ ತಾನು ಬಾಂಗ್ಲಾದಿಂದ ಬಂದಿದ್ದು, ನಡೆದ ಘಟನೆ ಹೇಳಿದ್ದಾಳೆ.

ಸ್ವಯಂಸೇವಾ ಸಂಸ್ಥೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಯುವತಿಯನ್ನು ಪ್ರಧಾನನಗರ ಠಾಣೆ ಪೊಲಿಸರು ವಶಕ್ಕೆ ಪಡೆದು ಬಂಧಿಸಿದ್ದಾರೆ. ಪ್ರೀತಿಯನ್ನು ನಂಬಿ ಅಂತರಾಷ್ಟ್ರೀಯ ಗಡಿ ದಾಟಿ ಬಂದ ಯುವತಿ ಜೈಲಿನಲ್ಲಿ ಬಂಧಿಯಾಗುವಂತಾಗಿದೆ. ಅಂತರಾಷ್ಟ್ರೀಯ ಗಡಿಯನ್ನು ಅಕ್ರಮವಾಗಿ ಪ್ರವೇಶ ಮಾಡಿದ ಆರೋಪದ ಮೇಲೆ ಆಕೆ ವಿರುದ್ಧ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read