Shocking : ನವಜೋಡಿಗಳ ದುರಂತ ಅಂತ್ಯ : ಪತಿ ಸಾವಿನ ಶಾಕ್ ಗೆ ಪತ್ನಿಯೂ ಆತ್ಮಹತ್ಯೆಗೆ ಶರಣು..!

ನವದೆಹಲಿ: ಹೃದಯಾಘಾತದಿಂದ ಸಾವನ್ನಪ್ಪಿದ ಪತಿ ನೋಡಿ ಪತ್ನಿಯೂ ಆತ್ಮಹತ್ಯೆಗೆ ಶರಣಾದ ಘಟನೆ ಗಾಜಿಯಾಬಾದ್ ನಡೆದಿದೆ.

ಗಾಜಿಯಾಬಾದ್ ಯುವ ದಂಪತಿಗಳು ಮೃಗಾಲಯಕ್ಕೆ ಭೇಟಿ ನೀಡಿದ್ದರು. ಇದಾದ 24 ಗಂಟೆಗಳ ನಂತರ, ಇಬ್ಬರೂ ಮೃತಪಟ್ಟಿದ್ದಾರೆ. 25 ವರ್ಷದ ಅಭಿಷೇಕ್ ಅಹ್ಲುವಾಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರೆ, ಅವರ ಪತ್ನಿ ಅಂಜಲಿ ಏಳನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ ವರ್ಷ ನವೆಂಬರ್ 30 ರಂದು ಈ ಜೋಡಿ ಮದುವೆಯಾಗಿತ್ತು, ಬಾಳಿ ಬದುಕಬೇಕಾದ ಜೋಡಿಗಳು ದುರಂತ ಅಂತ್ಯ ಕಂಡಿದ್ದಾರೆ.ಅಭಿಷೇಕ್ ಅವರ ಸಂಬಂಧಿ ಬಬಿತಾ ಪ್ರಕಾರ “ಶವವನ್ನು ಮನೆಗೆ ತಂದ ನಂತರ, ಅವಳು (ಪತ್ನಿ) ಪಕ್ಕದಲ್ಲಿ ಕುಳಿತು ಅಳುತ್ತಿದ್ದಳು. ನಂತರ ಅವಳು ಇದ್ದಕ್ಕಿದ್ದಂತೆ ಎದ್ದು ಬಾಲ್ಕನಿ ಕಡೆಗೆ ಓಡಿದಳು. ನಾವು ಅವಳ ಹಿಂದೆ ಓಡಿದೆವು, ಆದರೆ ನಾವು ಅವಳನ್ನು ತಡೆಯುವಷ್ಟರಲ್ಲೇ ಬಾಲ್ಕನಿಯಿಂದ ಜಿಗಿದಿದ್ದಾರೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read