ವಾಶ್ ರೂಮ್ ನಲ್ಲಿ ವಿದ್ಯಾರ್ಥಿನಿಯರು ಬಟ್ಟೆ ಬದಲಿಸುವಾಗ ರಹಸ್ಯ ಚಿತ್ರೀಕರಣ: ಸ್ವೀಪರ್ ಅರೆಸ್ಟ್

ನವದೆಹಲಿ: ದೆಹಲಿ ವಿಶ್ವವಿದ್ಯಾನಿಲಯದ ಭಾರ್ತಿ ಕಾಲೇಜಿನ ಸುಮಾರು 10 ವಿದ್ಯಾರ್ಥಿನಿಯರು ಇನ್ಸ್ಟಿಟ್ಯೂಟ್ ಫೆಸ್ಟ್‌ ನಲ್ಲಿ ಫ್ಯಾಶನ್ ಶೋಗಾಗಿ ಐಐಟಿ-ದೆಹಲಿ ವಾಶ್‌ ರೂಮ್‌ ನಲ್ಲಿ ಬಟ್ಟೆ ಬದಲಿಸುರುವಾಗ ರಹಸ್ಯವಾಗಿ ಚಿತ್ರೀಕರಣ ಮಾಡಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಭಾರತಿ ಕಾಲೇಜಿನ ಎಲಾಂಟ್ರೆ ಸೊಸೈಟಿಯ ಹುಡುಗಿಯರು, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಆಡಳಿತವು ಆರೋಪಿಗಳ ವಿರುದ್ಧ ಮಾಹಿತಿ ನೀಡಿದ ನಂತರವೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಕಿಶನ್‌ಗಢ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ 20 ವರ್ಷದ ಗುತ್ತಿಗೆ ಸ್ವೀಪರ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು, ಐಐಟಿ-ದೆಹಲಿಯ ಮಹಿಳಾ ವಾಶ್‌ರೂಮ್‌ನಲ್ಲಿ ಹುಡುಗನೊಬ್ಬ ವಿಡಿಯೋ ಮಾಡಿದ ಬಗ್ಗೆ ಕಿಶನ್‌ಗಢ ಪೊಲೀಸ್ ಠಾಣೆಯಲ್ಲಿ ಎಕ್ಸ್ ಮೂಲಕ ದೂರು ಸ್ವೀಕರಿಸಲಾಗಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏತನ್ಮಧ್ಯೆ, ಐಐಟಿ-ದೆಹಲಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ವಿಷಯವನ್ನು ತಕ್ಷಣವೇ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಅಕ್ಟೋಬರ್ 6 ರಂದು ದುರದೃಷ್ಟಕರ ಮತ್ತು ವಿಷಾದನೀಯ ಘಟನೆಯಲ್ಲಿ ಆರೋಪಿಯನ್ನು ತಕ್ಷಣವೇ ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಯಿತು, ಅವರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸಂಸ್ಥೆಯು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಪೊಲೀಸರೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದೆ ಎಂದು ಹೇಳಿದೆ.

ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಒಕ್ಕೂಟವೂ ಘಟನೆಯನ್ನು ಖಂಡಿಸಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read