ವಾರ್ಡ್​ ಕೈತಪ್ಪಿ ಹೋಗಬಾರದೆಂದು ದಿಢೀರ್​ ಮದ್ವೆಯಾದ ಕಾಂಗ್ರೆಸ್​ ಮುಖಂಡ….!

ಹಲವು ರಾಜಕಾರಣಿಗಳು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ ಎನ್ನುವ ಮಾತಿದೆ. ಅದಕ್ಕೆ ಒಂದು ಉದಾಹರಣೆ ಇಲ್ಲಿದೆ. 45 ವರ್ಷ ವಯಸ್ಸಿನ ಕಾಂಗ್ರೆಸ್​ ಮುಖಂಡ ಮಾಮುನ್ ಖಾನ್ ಚುನಾವಣೆಗಾಗಿ ಮದುವೆಯಾಗಿದ್ದಾರೆ.

ನಿಜ, ರಾಂಪುರ ಮುನ್ಸಿಪಲ್ ಸ್ಥಾನವನ್ನು ಮಹಿಳೆಯರಿಗೆ ಮೀಸಲಿಡಲಾಗಿತ್ತು. ಹಾಲಿ ಈ ವಾರ್ಡ್​ಗೆ ಮಾಮುನ್ ಖಾನ್ ಅಧ್ಯಕ್ಷರಾಗಿದ್ದರು. ಆದರೆ ಈ ವಾರ್ಡ್​ ಈಗ ಮಹಿಳೆಯರಿಗೆ ಮೀಸಲು ಇಟ್ಟಿದ್ದರಿಂದ ಬೇರೆಯವರ ಪಾಲು ಆಗಬಾರದು ಎನ್ನುವ ಕಾರಣಕ್ಕೆ ಗಡಿಬಿಡಿಯಿಂದ ಮದುವೆಯಾಗಿದ್ದಾರೆ.

ಇವರಿಗೆ 45 ವರ್ಷ ವಯಸ್ಸಾಗಿದ್ದರೂ ಮದುವೆಯಾಗಿರಲಿಲ್ಲ. ಯಾವಾಗ ಮೀಸಲಾತಿ ಪ್ರಕಟವಾಯಿತೋ 45 ಗಂಟೆ ಒಳಗೆ ಹುಡುಗಿಯನ್ನು ಹುಡುಕಿದ್ದಾರೆ…! ಕಳೆದ ಮೂರು ದಶಕಗಳಿಂದ ರಾಮ್‌ಪುರ ನಗರದಲ್ಲಿ ಕಾಂಗ್ರೆಸ್‌ನ ಧ್ವಜಧಾರಿ ಎಂದು ಗುರುತಿಸಲ್ಪಟ್ಟಿರುವ ಖಾನ್, ತಮ್ಮ ರಾಜಕೀಯ ವೃತ್ತಿಜೀವನವನ್ನು ಮುಂದುವರಿಸಲು ಈ ರೀತಿ ಮಾಡಿರುವುದಾಗಿ ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read