ರಾಜಸ್ಥಾನದ ಭಿಲ್ವಾರಾದಲ್ಲಿ ಮಂಗಳವಾರ ಪೆಟ್ರೋಲ್ ಪಂಪ್ ಉದ್ಯೋಗಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದ SDM ಛೋಟು ಲಾಲ್ ಶರ್ಮಾ ಅವರನ್ನು ರಾಜಸ್ಥಾನ ಸರ್ಕಾರ ಗುರುವಾರ ಅಮಾನತುಗೊಳಿಸಿದೆ. ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.
ಪ್ರತಾಪ್‌ಗಢದಲ್ಲಿ ಪ್ರಸ್ತುತ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಆಗಿ ನೇಮಕಗೊಂಡಿರುವ ಛೋಟು ಲಾಲ್ ಶರ್ಮಾ, ಸಿಎನ್‌ಜಿ ಮಾರಾಟ ಮಾಡುವ ಪೆಟ್ರೋಲ್ ಪಂಪ್‌ನ ಸಿಬ್ಬಂದಿಯೊಂದಿಗೆ ತೀವ್ರ ವಾಗ್ವಾದದಲ್ಲಿ ತೊಡಗಿದ್ದಾಗ ಮಂಗಳವಾರ ಈ ಘಟನೆ ವರದಿಯಾಗಿದೆ.
ಅಧಿಕಾರಿಯ ಕಾರಿನ ಮುಂದೆ ಇದ್ದ ಮತ್ತೊಂದು ಕಾರ್ ಗೆ ಸಿಎನ್‌ಜಿ ತುಂಬಿಸುವ ಬಗ್ಗೆ ವಿವಾದದ ನಂತರ ವಾಗ್ವಾದ ನಡೆಯಿತು. ಪೊಲೀಸರ ಪ್ರಕಾರ, ಶರ್ಮಾ ಸಿಬ್ಬಂದಿ ಮತ್ತೊಂದು ಕಾರ್ ಗೆ ಸಿಎನ್‌ಜಿ ತುಂಬಿಸುವುದನ್ನು ವಿರೋಧಿಸಿದರು, ಅವರು ಮೊದಲೇ ಬಂದ ಕಾರಣ ಅವರ ಕಾರಿಗೆ ಮೊದಲು ಇಂಧನ ತುಂಬಿಸಬೇಕು ಎಂದು ವಾದಿಸಿದರು.
ಪೆಟ್ರೋಲ್ ಪಂಪ್ ಸಿಬ್ಬಂದಿಯಿಂದಲೂ ಪ್ರತಿದಾಳಿ
ಈ ಸಮಯದಲ್ಲಿ, ಮತ್ತೊಬ್ಬ ಪೆಟ್ರೋಲ್ ಪಂಪ್ ಉದ್ಯೋಗಿ ಮಧ್ಯಪ್ರವೇಶಿಸಿದಾಗ, ಅಧಿಕಾರಿ ಅವರ ಮೇಲೆ ಕಪಾಳಮೋಕ್ಷ ಮಾಡಿದರು. ಇದರಿಂದಾಗಿ ನೌಕರನು ಸಹ ಕಪಾಳಮೋಕ್ಷ ಮಾಡಿ ಪ್ರತೀಕಾರ ತೀರಿಸಿಕೊಂಡನು.
ಇಡೀ ಘಟನೆ ಪೆಟ್ರೋಲ್ ಪಂಪ್‌ನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ವಾಗ್ವಾದದ ವೀಡಿಯೊ ಬುಧವಾರ ಬೆಳಕಿಗೆ ಬಂದಿದೆ.
ಮೂವರು ಪಂಪ್ ನೌಕರರ ಬಂಧನ
ಘಟನೆಗೆ ಸಂಬಂಧಿಸಿದಂತೆ ಮೂವರು ಪಂಪ್ ನೌಕರರಾದ ದೀಪಕ್ ಮಾಲಿ, ಪ್ರಭು ಲಾಲ್ ಕುಮಾವತ್ ಮತ್ತು ರಾಜ ಶರ್ಮಾ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Jaipur, Rajasthan | Chhotu Lal Sharma, SDM, reportedly involved in a clash at a CNG pump, has been suspended pic.twitter.com/Q5mk8v7vh0
— ANI (@ANI) October 24, 2025
