ಹೆಲ್ಮೆಟ್​ ಹಾಕುವಂತೆ ಬುದ್ಧಿ ಹೇಳಬೇಡಿ ಎಂದ ಯುವತಿಗೆ ಮರುಕ್ಷಣವೆ ಆದದ್ದೇನು ನೋಡಿ…..!

ನೀವು ಯಾರೊಬ್ಬರ ಯೋಗ ಕ್ಷೇಮದ ಬಗ್ಗೆ ಯೋಚಿಸಿದಾಗ ಅವರು ಅದನ್ನು ಲಘುವಾಗಿ ಪರಿಗಣಿಸಿದರೆ ನಿಮಗೆ ಅದರಿಂದ ನೋವಾಗಬಹುದು. ಆದರೆ ಇನ್ನೊಬ್ಬರ ಒಳಿತಿಗಾಗಿ ಏನಾದರೂ ಹೇಳಿದಾಗ ಅದನ್ನು ಅವರು ಕಿವಿಯ ಮೇಲೆ ಹಾಕಿಕೊಳ್ಳದೇ ನಂತರ ಪೇಚಿಗೆ ನಿಮ್ಮ ಎದುರೇ ಸಿಲುಕಿದರೆ ಹೇಗಿರುತ್ತದೆ? ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ.

ವೈರಲ್​ ವಿಡಿಯೋದಲ್ಲಿ ಯುವತಿಯೊಬ್ಬಳು ಹೆಲ್ಮೆಟ್​ ಇಲ್ಲದೇ ಸ್ಕೂಟಿಯಲ್ಲಿ ಹೋಗುತ್ತಿರುತ್ತಾಳೆ. ಹೀಗೆ ಹೆಲ್ಮೆಟ್​ ಇಲ್ಲದೇ ಹೋಗಬೇಡಿ, ಅದು ಒಳ್ಳೆಯದಲ್ಲ, ಮುಂದೆ ಟ್ರಾಫಿಕ್ ಪೊಲೀಸರು ದಂಡ ವಿಧಿಸಬಹುದು ಅಥವಾ ಬಿದ್ದರೆ ಪೆಟ್ಟಾಗಬಹುದು ಎಂದು ಇತ್ತ ಕಡೆಯಿಂದ ಹೋಗುತ್ತಿರುವ ಬೈಕರ್ ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದು.

ಆದರೆ ಇದನ್ನು ನಿರ್ಲಕ್ಷಿಸುವ ಯುವತಿ ಸೊಕ್ಕಿನಿಂದ ಸ್ವಲ್ಪ ದೂರ ಹೋಗುವಷ್ಟರದಲ್ಲಿಯೇ ಸಮತೋಲನವನ್ನು ಕಳೆದುಕೊಂಡು ಕೆಳಗೆ ಬೀಳುತ್ತಾಳೆ. ಅದೃಷ್ಟವಶಾತ್​ ಅವಳಿಗೆ ಏನೂ ಆಗುವುದಿಲ್ಲ. ಆದರೆ ಈ ವಿಡಿಯೋಗೆ ನೆಟ್ಟಿಗರು ವ್ಯಂಗ್ಯದ ಕಮೆಂಟ್‌ಗಳ ಸುರಿಮಳೆಯನ್ನೇಗೈದಿದ್ದಾರೆ.

https://www.youtube.com/watch?v=Ct1L-eQpo-g

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read