ಮೈಸೂರು : ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ಮೈಸೂರು – ಬೆಂಗಳೂರು ದಶಪಥ ಹೆದ್ದಾರಿಯ ಟೋಲ್ ದರವನ್ನು ಮತ್ತೆ ಹೆಚ್ಚಳ ಮಾಡಲಾಗಿದೆ. ಏಪ್ರಿಲ್ 1 ರಿಂದ ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ ವೇ ಟೋಲ್ ದರ ಏರಿಕೆಯಾಗುತ್ತಿದ್ದು, ವಾಹನ ಸವಾರರ ಜೇಬಿಗೆ ಮತ್ತೆ ಕತ್ತರಿ ಬೀಳಲಿದೆ.
ಜೂನ್ನಲ್ಲಿಶೇ.22 ರಷ್ಟು ಟೋಲ್ ದರ ಏರಿಕೆಯಾಗಿತ್ತು. ಇದೀಗ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008-ನಿಯಮ 5ರ ಪ್ರಕಾರ ಬಳಕೆದಾರರ ಶುಲ್ಕ ದರದ ವಾರ್ಷಿಕ ಪರಿಷ್ಕರಣೆಯಂತೆ ಮತ್ತೆ ಟೋಲ್ ದರ ಹೆಚ್ಚಳ ಮಾಡಲಾಗಿದೆ.
ಕಾರು ಏಕಮುಖ ಸಂಚಾರ 170, ದ್ವಿಮುಖ ಸಂಚಾರ 255, ಲಘು ವಾಣಿಜ್ಯ ವಾಹನ ಏಕಮುಖ 270, ದ್ವಿಮುಖ ಸಂಚಾರ 415, ಟ್ರಕ್ ಬಸ್ ಏಕಮುಖ 580, ದ್ವಿಮುಖ 870 , ಮೂರು ಆಕ್ಸೆಲ್ ವಾಣಿಜ್ಯ ವಾಹನ 635 , ದ್ವಿಮುಖ 950, ದೊಡ್ಡ ಗಾತ್ರದ ವಾಹನ 1080 ರಿಂದ 1620, 4 ಅಥವಾ ಆರು ಆಕ್ಸೆಲ್ ನ ವಾಹನ ಏಕಮುಖ 1110, ದ್ವಿಮುಖ 1660 .