ಬೆಂಗಳೂರು: ವಿದ್ಯಾರ್ಥಿನಿಯೊಬ್ಬಳು ಶಾಲೆಗೆ ರಜೆ ಹಾಕಿದ್ದಕ್ಕೆ ಮುಖ್ಯ ಶಿಕ್ಷಕಿ ಆಕೆಗೆ ಬಾಸುಂಡೆ ಬರುವಂತೆ ಥಳಿಸಿ ಹಿಂಸಿಸಿರುವ ಘಟನೆ ಬೆಂಗಳೂರಿನ ಉತ್ತರ ತಾಲೂಕಿನ ಶಾಲೆಯಲ್ಲಿ ನಡೆದಿದೆ.
ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ. 5ನೇ ತರಗತಿ ವಿದ್ಯಾರ್ಥಿನಿ ಯಮುನಾ ಮುಖ್ಯ ಶಿಕ್ಷಕಿಯಿಂದ ಹಲ್ಲೆಗೊಳಗಾದ ಬಾಲಕಿ. ವಿದ್ಯಾರ್ಥಿನಿ ಕ್ಲಾಸ್ ಟೀಚರ್ ಗೆ ಹೇಳಿ ರಜೆ ಹಾಕಿದ್ದಳಂತೆ. ರಜೆ ಮುಗಿಸಿ ಶಾಲೆಗೆ ಬಂದ ವಿದ್ಯಾರ್ಥಿನಿಯನ್ನು ಪ್ರಶ್ನೆ ಮಾಡಿದ ಮುಖ್ಯ ಶಿಕ್ಷಕಿ ಬಾಸುಂಡೆ ಬರುವಂತೆ ಹೊಡೆದಿದ್ದಾರೆ.
ಮುಖ್ಯ ಶಿಕ್ಷಕಿ ಚಂದ್ರಕಲಾ ವಿರುದ್ಧ ವಿದ್ಯಾರ್ಥಿನಿ ಪೋಷಕರು ಆರೋಪಿಸಿದ್ದಾರೆ. ಅಲ್ಲದೇ ವಿದ್ಯಾರ್ಥಿನಿ ಮೇಲೆ ನಡೆದ ಹಲ್ಲೆಗೆ ಕಾರಣ ಕೇಳಿದ್ದಕ್ಕೆ ನಾನೇ ಹೊಡೆದಿದ್ದಾಗಿ ಮುಖ್ಯ ಶಿಕ್ಷಕಿ ಹೇಳಿದ್ದಾಳೆ. ವಿದ್ಯಾರ್ಥಿನಿ ಮೈಮೇಲೆ ಬಾಸುಂಡೆ ಬಂದಿದ್ದು, ನೋವಿನಿಂದ ಜ್ವರದಿಂದ ಬಳಲುತ್ತಿದ್ದಾಳೆ. ಶಿಕ್ಷಕಿ ಹಿಂಸೆಗೆ ಬೆದರಿರುವ ವಿದ್ಯಾರ್ಥಿನಿ ಊಟ-ತಿಂಡಿ ಬಿಟ್ಟು ಕುಳಿತಿದ್ದಾಳೆ ಎಂದು ವಿದ್ಯಾರ್ಥಿನಿ ತಾಯಿ ಕಣ್ಣೀರಿಟ್ತಿದ್ದಾರೆ. ಮುಖ್ಯ ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಲುವಂತೆ ಆಗ್ರಹಿಸಿದ್ದಾರೆ.