ಭೋಪಾಲ್: ಮಕ್ಕಳು ಹೊರಗಡೆ ಆಟವಾಡುತ್ತಿದ್ದರೆ, ಇತ್ತ ಕ್ಲಾಸ್ ರೂಮಿನಲ್ಲಿ ಶಿಕ್ಷಕ ಮಕ್ಕಳ ಶಾಲಾ ಬ್ಯಾಗ್ ಗಳನ್ನೇ ತಲೆ ದಿಂಬು ಮಾಡಿಕೊಂಡು ಗಡದ್ದಾಗಿ ನಿದ್ದೆಗೆ ಜಾರಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದ ಛತ್ತರ್ ಪುರ ಜಿಲ್ಲೆಯ ಲವಕುಶನಗರದ ಸರ್ಕಾರಿ ಶಾಲೆಯೊಂದರ ಮುಖ್ಯೋಪಾಧ್ಯಾಯ ರಾಜೇಶ್ ಕುಮಾರ್, ವಿದ್ಯಾರ್ಥಿಗಳ ಬ್ಯಾಗ್ ನ್ನೇ ತಲೆಯಡಿಯಿಟ್ಟು ತರಗತಿಯಲ್ಲಿಯೇ ನಿದ್ದೆ ಮಾಡಿದ್ದಾರೆ.
ಶಿಕ್ಷಕನ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಶಿಕ್ಷಕನ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಜಿಲ್ಲಾ ಶಿಕ್ಷಣಾಧಿಕಾರಿಗಳು ಮುಖ್ಯಶಿಕ್ಷಕನ ವಿರುದ್ಧ ಶಿಸ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
https://twitter.com/manishkharya1/status/1679765581510365184?ref_src=twsrc%5Etfw%7Ctwcamp%5Etweetembed%7Ctwterm%5E1679765581510365184%7Ctwgr%5E179244a754639acd1bb32cfb481b58caa99f59c0%7Ctwcon%5Es1_&ref_url=https%3A%2F%2Fwww.freepressjournal.in%2Fbhopal%2Fmp-viral-video-school-headmaster-caught-taking-nap-in-classroom-leaving-kids-to-play