HomeKarnatakaBIG NEWS: ಶಾಲಾ ಬಸ್ ಮಹಿಳಾ ಕಂಡಕ್ಟರ್ ಬರ್ಬರ ಹತ್ಯೆ

BIG NEWS: ಶಾಲಾ ಬಸ್ ಮಹಿಳಾ ಕಂಡಕ್ಟರ್ ಬರ್ಬರ ಹತ್ಯೆ

ಚಿತ್ರದುರ್ಗ: ಖಾಸಗಿ ಶಾಲೆಯ ಮಹಿಳ ಅಬಸ್ ಕಂಡಕ್ಟರ್ ಓರ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕೆಂಗುಂಟೆ ಗ್ರಾಮದ ಅರಣ್ಯದಲ್ಲಿ ನಡೆದಿದೆ.

ಮೃತರನ್ನು ಹೊಳಲ್ಕೆರೆ ತಾಲೂಕಿನ ರಾಮಘಟ್ಟ ಗ್ರಾಮದ ನಿವಾಸಿ ಆಶಾ (25) ಎಂದು ಗುರುತಿಸಲಾಗಿದೆ. ಆಶಾ ಹೊಳಲ್ಕೆರೆಯ ಖಾಸಗಿ ಶಾಲೆಯ ಬಸ್ ನಿರ್ವಾಹಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಶಾ ತನ್ನ ಪರಿಚಯದವನೇ ಆದ ಅನಿಲಾಸನ್ ಎಂಬಾತನಿಗೆ ಸಾಲದ ರೂಪದಲ್ಲಿ 56,000 ರೂಪಾಯಿ ಹಣ ನೀಡಿದ್ದರಂತೆ. ಹಣ ವಾಪಾಸ್ ಕೇಳಿದಾಗ ಅನಿಲಾಸನ್ ಜಗಳವಾಡಿದ್ದ. ಹಲವು ಬಾರಿ ಸ್ಥಳೀಯರ ಸಮ್ಮುಖದಲ್ಲಿ ರಾಜೀ ಸಂಧಾನವೂ ನಡೆದಿತ್ತು. ಎರಡು ದಿನಗಳ ಹಿಂದೆ ಹಣ ಕೊಡುವುದಾಗಿ ಕರೆ ಮಾಡಿದ್ದ ಅನಿಲಾಸನ್ ಕೆಂಗ್ಗುಂಟೆ ಅರಣ್ಯ ಪ್ರದೇಶಕ್ಕೆ ಆಶಾಳನ್ನು ಕರೆದೊಯ್ದು ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾನೆ.

ಘಟನಾ ಸ್ಥಳಕ್ಕೆ ಡಿವೈಎಸ್ ಪಿ ದಿನಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular