ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯಲ್ಲಿ ಇರುವ ಉಪ ಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ಹೊಸದಾದ ಸಮೀಕ್ಷೆ ನಡೆಸಿ ದತ್ತಾಂಶವನ್ನು ಸಂಗ್ರಹಿಸಿದ ಪ್ರತಿ ಸಮೀಕ್ಷಾದಾರರಿಗೆ ಪ್ಲಾಟ್ ದರವಾಗಿ ರೂ.5000 ಗಳ ಸಂಭಾವನೆ ಹಾಗೂ ಪ್ರತಿ ಪರಿಶಿಷ್ಟ ಜಾತಿಯ ಕುಟುಂಬದ ಸಮೀಕ್ಷೆಗೆ ರೂ.100 ರಂತೆ ಮೊತ್ತವನ್ನು ನಿಗಧಿಪಡಿಸಲಾಗಿತ್ತು.
ಅದರಂತೆ ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ಅವರು ಪ್ರಥಮ ಹಂತದಲ್ಲಿ ಜಿಲ್ಲೆಗೆ ಬಿಡುಗಡೆಗೊಳಿಸಿದ ರೂ.16,71,000 ಗಳಲ್ಲಿ ಮೊದಲನೇ ಕಂತಿನಲ್ಲಿ ಜಿಲ್ಲೆಯಲ್ಲಿ ಗಣತಿಕಾರ್ಯ ನಿರ್ವಹಿಸಿದ ಸಮೀಕ್ಷಾದಾರರ ಬ್ಯಾಂಕ್ ಖಾತೆಗೆ ತಲಾ ರೂ.3000 ಗಳಂತೆ ಈಗಾಗಲೇ ಪಾವತಿಸಲಾಗಿದೆ.
ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ಇವರಿಂದ ಬಾಕಿ ಅನುದಾನ ಬಿಡುಗಡೆಯಾದ ಕೂಡಲೇ ಗಣತಿದಾರರಿಗೆ ಪಾವತಿಸಲು ಬಾಕಿ ಇರುವ ರೂ.2 ಸಾವಿರಗಳನ್ನು ಹಾಗೂ ಪ್ರತಿ ಪರಿಶಿಷ್ಟ ಜಾತಿಯ ಕುಟುಂಬದ ಸಮೀಕ್ಷೆಗೆ ರೂ.100 ಗಳನ್ನು ಪಾವತಿಸಲು ಕ್ರಮವಹಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್ ಅವರು ತಿಳಿಸಿದ್ದಾರೆ.