ಗೂಗಲ್ ಪೇ, ಫೋನ್ ಪೇ, ಪೇಟಿಎಂ ಅಂತ ಯುಪಿಐ ಆ್ಯಪ್ ಬಳಸೋ ಜನರಿಗೆ ಸೈಬರ್ ತಜ್ಞರು ಹೊಸ ಅಲರ್ಟ್ ಕೊಟ್ಟಿದ್ದಾರೆ. ಕಳ್ಳರು ಈಗ ಅಸಲಿ ಆ್ಯಪ್ ತರಾನೇ ಕಾಣೋ ನಕಲಿ ಯುಪಿಐ ಆ್ಯಪ್‌ಗಳನ್ನು ರೆಡಿ ಮಾಡಿದ್ದಾರೆ. ಇದರಿಂದ ಜನ ಪೇಮೆಂಟ್ ಆಯ್ತು ಅಂತ ನಂಬ್ತಾರೆ, ಆದ್ರೆ ಅಸಲಿಗೆ ಹಣ ಟ್ರಾನ್ಸ್‌ಫರ್ ಆಗಿರಲ್ಲ ! ಈ ಮೋಸ ಹೆಚ್ಚಾಗಿ ಅಂಗಡಿ ಮಾಲೀಕರು, ವ್ಯಾಪಾರಿಗಳು ಮತ್ತೆ ಸಣ್ಣ ಉದ್ಯಮಗಳನ್ನೇ ಟಾರ್ಗೆಟ್ ಮಾಡ್ತಿದೆ.
ಹೊಸ ಸೈಬರ್ ಮೋಸ: ಸೌಂಡ್‌ಬಾಕ್ಸ್ ಇದ್ರೂ ಪೇಮೆಂಟ್ ಫೇಕ್ ! ವಂಚಕರು ಅಂಗಡಿಗಳಲ್ಲಿ ನಕಲಿ ಯುಪಿಐ ಆ್ಯಪ್ ಬಳಸಿ ಪೇಮೆಂಟ್ ಮಾಡ್ದಂಗೆ ನಾಟಕ ಮಾಡ್ತಾರೆ. ಅಂಗಡಿಯಲ್ಲಿದ್ದ ಸೌಂಡ್‌ಬಾಕ್ಸ್ ಕೂಡಾ ಪೇಮೆಂಟ್ ಕನ್ಫರ್ಮ್ ಆದ ಮೆಸೇಜ್ ಪ್ಲೇ ಮಾಡುತ್ತೆ. ಆದ್ರೆ ನಿಜವಾಗಿ ಯಾವ್ದೇ ದುಡ್ಡು ಹೋಗಿರಲ್ಲ ! ಡೆಕ್ಕನ್ ಕ್ರಾನಿಕಲ್ ಪ್ರಕಾರ, ಈ ನಕಲಿ ಆ್ಯಪ್‌ಗಳು ಟೆಲಿಗ್ರಾಮ್ ಮತ್ತೆ ಬೇರೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಿದಾಡ್ತಿದ್ದು, ಗೊತ್ತಿಲ್ದೆ ಇರೋ ಯೂಸರ್ಸ್‌ಗೆ ಕಂಟಕವಾಗ್ತಿದೆ.
ಈ ನಕಲಿ ಆ್ಯಪ್‌ಗಳು ಕೆಲಸ ಮಾಡೋದು ಹೇಗೆ ? ಸೈಬರ್ ಕಳ್ಳರು ಫೇಮಸ್ ಯುಪಿಐ ಆ್ಯಪ್‌ಗಳ ಡಿಸೈನ್ ಮತ್ತೆ ಫೀಚರ್ಸ್‌ನ್ನೇ ಕಾಪಿ ಮಾಡಿದ್ದಾರೆ. ಈ ಫೇಕ್ ಆ್ಯಪ್‌ಗಳು ಸುಳ್ಳು ಪೇಮೆಂಟ್ ಕನ್ಫರ್ಮೇಷನ್ ತೋರಿಸ್ತವೆ. ಇದರಿಂದ ಪೇಮೆಂಟ್ ಸಕ್ಸಸ್ ಆಗಿದೆ ಅಂತ ಅನ್ಸುತ್ತೆ. ಕೆಲವು ಆ್ಯಪ್‌ಗಳು ಪೇಮೆಂಟ್ ಆಗಿದೆ ಅಂತ ಕಸ್ಟಮರ್‌ಗಳು ನಂಬೋ ತರ ನಕಲಿ ಪೇಮೆಂಟ್ ಸ್ಕ್ರೀನ್‌ಗಳನ್ನೂ ತೋರಿಸ್ತವೆ.
ಹೇಗೆ ಈ ನಕಲಿ ಆ್ಯಪ್‌ಗಳಿಂದ ತಪ್ಪಿಸಿಕೊಳ್ಳೋದು ?
- ಏನಾದ್ರೂ ಕೊಡುವ ಮುಂಚೆ ನಿಮ್ಮ ಬ್ಯಾಂಕ್ ಅಕೌಂಟ್ ಇಲ್ಲಾಂದ್ರೆ ಯುಪಿಐ ಆ್ಯಪ್‌ನಲ್ಲಿ ಪೇಮೆಂಟ್ ಕನ್ಫರ್ಮ್ ಮಾಡ್ಕೊಳ್ಳಿ.
- ಬರೀ ಸೌಂಡ್‌ಬಾಕ್ಸ್ ಮೆಸೇಜ್ ನಂಬಬೇಡಿ – ಪೇಮೆಂಟ್ ಡೀಟೇಲ್ಸ್ ಚೆಕ್ ಮಾಡಿ.
- ಗೂಗಲ್ ಪ್ಲೇ ಸ್ಟೋರ್ ಇಲ್ಲಾಂದ್ರೆ ಆ್ಯಪಲ್ ಆ್ಯಪ್ ಸ್ಟೋರ್‌ನಿಂದ ಮಾತ್ರ ಯುಪಿಐ ಆ್ಯಪ್ ಡೌನ್‌ಲೋಡ್ ಮಾಡಿ.
- ಯಾರಾದ್ರೂ ಹೊಸ ಆ್ಯಪ್ ಬಳಸಿ ಪೇಮೆಂಟ್ ಮಾಡ್ತಿದ್ರೆ ಹುಷಾರಾಗಿರಿ.
- ಏನಾದ್ರೂ ಮೋಸದ ಪೇಮೆಂಟ್ ಆದ್ರೆ ತಕ್ಷಣ ಸೈಬರ್ ಕ್ರೈಮ್ ಹೆಲ್ಪ್‌ಲೈನ್ 1930 ಗೆ ಕಾಲ್ ಮಾಡಿ ಇಲ್ಲಾಂದ್ರೆ ಪೊಲೀಸರಿಗೆ ಕಂಪ್ಲೇಂಟ್ ಕೊಡಿ.
ಯುಪಿಐ ಯೂಸರ್ಸ್‌ಗೆ ಲಾಸ್ಟ್ ವಾರ್ನಿಂಗ್: ಡಿಜಿಟಲ್ ಪೇಮೆಂಟ್ ಜಾಸ್ತಿಯಾದ್ದರಿಂದ, ಕಳ್ಳರು ಜನರನ್ನು ಮೋಸ ಮಾಡೋಕೆ ಹೊಸ ಹೊಸ ದಾರಿ ಕಂಡುಹಿಡಿತಾ ಇದ್ದಾರೆ. ನೀವ್ ಅಂಗಡಿ ಮಾಲೀಕರಾಗಿರಲಿ, ಉದ್ಯಮದ ಓನರ್ ಆಗಿರಲಿ ಇಲ್ಲಾಂದ್ರೆ ಕಾಮನ್ ಯುಪಿಐ ಯೂಸರ್ ಆಗಿರಲಿ, ಪೇಮೆಂಟ್ ಕನ್ಫರ್ಮ್ ಮಾಡೋ ಮುಂಚೆ ಯಾವಾಗಲೂ ಚೆಕ್ ಮಾಡಿ. ಹುಷಾರಾಗಿರಿ ಮತ್ತೆ ಯಾವತ್ತೂ ಈ ನಕಲಿ ಯುಪಿಐ ಆ್ಯಪ್‌ಗಳಿಗೆ ಬಲಿ ಆಗಬೇಡಿ.