ದೇಶದ ಅತೊದೊಡ್ಡ ಬ್ಯಾಂಕ್ SBI ನಲ್ಲಿ ಸರ್ಕಲ್ ಆಧಾರಿತ ಅಧಿಕಾರಿಗಳ(CBO) ನೇಮಕಾತಿಗಾಗಿ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದೆ.
ಅರ್ಹ ಅಭ್ಯರ್ಥಿಗಳು ಮೇ 29, 2025 ರಂದು ಅಥವಾ ಅದಕ್ಕೂ ಮೊದಲು ತಮ್ಮ ಅರ್ಜಿಗಳನ್ನು ಸಲ್ಲಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಅಭ್ಯರ್ಥಿಗಳ ಆಯ್ಕೆಯು ಹಲವಾರು ಮೌಲ್ಯಮಾಪನಗಳನ್ನು ಆಧರಿಸಿರುತ್ತದೆ. ಆನ್‌ಲೈನ್ ಪರೀಕ್ಷೆ, ಸ್ಕ್ರೀನಿಂಗ್, ಸಂದರ್ಶನ ಮತ್ತು ಭಾಷಾ ಪ್ರಾವೀಣ್ಯತೆಯ ಪರೀಕ್ಷೆ ಬಳಿಕ ನೇಮಕಾತಿ ಪ್ರಕ್ರಿಯೆ ಪೂರ್ಣವಾಗಲಿದೆ.
SBI ಸರ್ಕಲ್ ಆಧಾರಿತ ಅಧಿಕಾರಿಗಳ ಹುದ್ದೆಗೆ ಒಟ್ಟು 3,323 ಹುದ್ದೆಗಳು ಖಾಲಿ ಇವೆ. ಅರ್ಜಿದಾರರು ಅರ್ಹತೆ ಪಡೆಯಲು ಯಾವುದೇ ವಿಭಾಗದಲ್ಲಿ ಪದವಿ(ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ) ಅಥವಾ ಸಮಾನ ಅರ್ಹತೆಯನ್ನು (GOI ನಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ) ಪಡೆದಿರಬೇಕು
ವೈದ್ಯಕೀಯ, ಚಾರ್ಟರ್ಡ್ ಅಕೌಂಟೆನ್ಸಿ, ಎಂಜಿನಿಯರಿಂಗ್ ಅಥವಾ ವೆಚ್ಚ ಲೆಕ್ಕಪತ್ರ ನಿರ್ವಹಣೆ ಪದವಿ ಹೊಂದಿರಬಹುದು:.
21 ರಿಂದ 30 ವರ್ಷ ವಯಸ್ಸಿನವರಾಗಿರಬೇಕು(ಮೇ 1, 1995 ರಿಂದ ಏಪ್ರಿಲ್ 30, 2004 ರ ನಡುವೆ ಜನಿಸಿದವರು)
ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್‌ಗೆ 750 ರೂ., ಮತ್ತು ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಬಿಡಿಗೆ ಶುಲ್ಕವಿಲ್ಲ
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಡೆಬಿಟ್/ಕ್ರೆಡಿಟ್ ಕಾರ್ಡ್, ಯುಪಿಐ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಶುಲ್ಕವನ್ನು ಪಾವತಿಸಬೇಕು.
ಅರ್ಜಿ ಸಲ್ಲಿಸಲು SBI ನ ಅಧಿಕೃತ ವೆಬ್ ಸೈಟ್ sbi.co.in ಗೆ ಭೇಟಿ ನೀಡಿ.