ಕಣ್ಣಿನ ಸುತ್ತ ಕಾಡುವ ಕಪ್ಪು ಕಲೆ ಸಮಸ್ಯೆಗೆ ಹೀಗೆ ಹೇಳಿ ಗುಡ್ ಬೈ

ಬದಲಾದ ಜೀವನ ಶೈಲಿ ಹಾಗೂ ದೀರ್ಘ ಸಮಯದವರೆಗೆ ಕಂಪ್ಯೂಟರ್ ಹಾಗೂ ಮೊಬೈಲ್ ವೀಕ್ಷಣೆಯಿಂದಾಗಿ ಕಣ್ಣುಗಳ ಸುತ್ತ ಕಪ್ಪು ಕಲೆ ಕಾಣಿಸಿಕೊಳ್ಳುತ್ತದೆ. ಇದು ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಒತ್ತಡ, ನಿದ್ರೆಯ ಕೊರತೆ, ಹಾರ್ಮೋನ್ ಬದಲಾವಣೆ, ಅನುವಂಶಿಕತೆ ಇವೆಲ್ಲವೂ ಇದಕ್ಕೆ ಕಾರಣವಾಗುತ್ತದೆ. ಮನೆಯಲ್ಲಿಯೇ ಕೆಲವು ಮದ್ದುಗಳನ್ನು ಮಾಡುವ ಮೂಲಕ ಇದನ್ನು ಕಡಿಮೆ ಮಾಡಬಹುದು.

ನಿಮ್ಮ ಕಣ್ಣಿನ ಸುತ್ತಲೂ ಡಾರ್ಕ್ ಸರ್ಕಲ್ ಇದ್ರೆ ನೀವು ಟೋಮಾಟೋ ಬಳಸಬಹುದು. ಇದು ಚರ್ಮವನ್ನು ಮೃದು ಮಾಡುತ್ತದೆ. ಒಂದು ಚಮಚ ಟೋಮಾಟೋ ರಸಕ್ಕೆ ಒಂದು ಚಮಚ ನಿಂಬೆ ರಸವನ್ನು ಬೆರೆಸಿ ಕಣ್ಣುಗಳ ಸುತ್ತ ಹಚ್ಚಬೇಕು. 10 ನಿಮಿಷ ಬಿಟ್ಟು ಸ್ವಚ್ಛ ನೀರಿನಲ್ಲಿ ತೊಳೆಯಬೇಕು. ಕೆಲ ದಿನಗಳ ಕಾಲ ಇದನ್ನು ಮಾಡಿದ್ರೆ ಕಪ್ಪು ಕಲೆ ಮಾಯವಾಗುತ್ತದೆ.

ಹಸಿ ಆಲೂಗಡ್ಡೆ ಕೂಡ ಪ್ರಯೋಜನಕಾರಿ. ಇದರ ರಸವನ್ನು ಕಣ್ಣಿನ ಸುತ್ತ ಹಚ್ಚಬೇಕು. ಇದನ್ನು ಕೂಡ ನಿಯಮಿತವಾಗಿ ಮಾಡಬೇಕು.

ತಣ್ಣನೆಯ ಹಾಲು ನಿಮ್ಮ ಸಮಸ್ಯೆಗೆ ಪರಿಹಾರ ನೀಡಬಲ್ಲದು. ತಣ್ಣನೆಯ ಹಾಲನ್ನು ಹತ್ತಿ ಬಟ್ಟೆಯಲ್ಲಿ ನೆನೆಸಿ ಮತ್ತು ಕಣ್ಣಿನ ಕಪ್ಪು ವೃತ್ತದ ಮೇಲೆ ಇರಿಸಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ಕಲೆ ಕಡಿಮೆಯಾಗುತ್ತದೆ.

ಕಿತ್ತಳೆ ರಸ ಕೂಡ ಪರಿಣಾಮಕಾರಿ. ಕಿತ್ತಳೆ ರಸ ಮತ್ತು ಗ್ಲಿಸರಿನ್‌ನ ಕೆಲವು ಹನಿಗಳನ್ನು ಹಚ್ಚಿದ್ರೆ ಡಾರ್ಕ್ ಸರ್ಕಲ್ ಕಡಿಮೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read