ಮುಂಬೈ: ‘ಸಾರಾಭಾಯಿ vs ಸಾರಾಭಾಯಿ’ ನಟ ಸತೀಶ್ ಶಾ(74) ಮೂತ್ರಪಿಂಡ ವೈಫಲ್ಯದಿಂದ ನಿಧನರಾಗಿದ್ದಾರೆ.
ಹಿರಿಯ ಬಾಲಿವುಡ್ ಮತ್ತು ಟಿವಿ ನಟ ಸತೀಶ್ ಶಾ ನಿಧನದ ಸುದ್ದಿಯನ್ನು ನಿರ್ದೇಶಕ ಅಶೋಕ್ ಪಂಡಿತ್ ದೃಢಪಡಿಸಿದ್ದಾರೆ.
ಕಲ್ ಹೋ ನಾ ಹೋ ನಟ ಶನಿವಾರ ಮೂತ್ರಪಿಂಡ ವೈಫಲ್ಯದಿಂದ ನಿಧನರಾದರು. ಅವರು ತಮ್ಮ ನಟನಾ ವೃತ್ತಿಜೀವನದುದ್ದಕ್ಕೂ ಹಲವಾರು ಅಪ್ರತಿಮ ಪ್ರದರ್ಶನಗಳನ್ನು ನೀಡಿದ್ದಾರೆ. ಅವರ ಗಮನಾರ್ಹ ಪಾತ್ರಗಳಲ್ಲಿ ಕಲ್ ಹೋ ನಾ ಹೋ, ಜಾನೆ ಭಿ ದೋ ಯಾರೋ, ಸಾರಾಭಾಯಿ v/S ಸಾರಾಭಾಯಿ, ಮೈ ಹೂ ನಾ ಸೇರಿವೆ.
ಅವರ ಹಠಾತ್ ನಿಧನ ಚಲನಚಿತ್ರೋದ್ಯಮದಲ್ಲಿ ದುಃಖದ ಅಲೆ ಮೂಡಿಸಿದೆ. ಅನೇಕ ಅಭಿಮಾನಿಗಳು ಅವರ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಪ್ರಸಿದ್ಧ ನಟ ಜಾನಿ ಲಿವರ್ ಅವರು ಸತೀಶ್ ಶಾ ಅವರ ನಿಧನಕ್ಕೆ ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ದುಃಖ ವ್ಯಕ್ತಪಡಿಸಿದ್ದಾರೆ. “ನಾವು ಒಬ್ಬ ಮಹಾನ್ ಕಲಾವಿದ ಮತ್ತು 40 ವರ್ಷಗಳಿಗೂ ಹೆಚ್ಚು ಕಾಲ ನನ್ನ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿದ್ದೇವೆ ಎಂದು ಹಂಚಿಕೊಳ್ಳಲು ತುಂಬಾ ದುಃಖವಾಗುತ್ತಿದೆ. ನಂಬಲು ಕಷ್ಟ – ನಾನು ಎರಡು ದಿನಗಳ ಹಿಂದೆಯೇ ಅವರೊಂದಿಗೆ ಮಾತನಾಡಿದ್ದೆ. ಸತೀಶ್ ಭಾಯ್, ನಿಮ್ಮನ್ನು ನಿಜವಾಗಿಯೂ ಮಿಸ್ ಮಾಡಿಕೊಳ್ಳುತ್ತೇನೆ. ಚಲನಚಿತ್ರ ಮತ್ತು ದೂರದರ್ಶನಕ್ಕೆ ನಿಮ್ಮ ಅಪಾರ ಕೊಡುಗೆಯನ್ನು ಎಂದಿಗೂ ಮರೆಯಲಾಗುವುದಿಲ್ಲ” ಎಂದು ಅವರು ಬರೆದಿದ್ದಾರೆ.
ಸಿನಿ ಮತ್ತು ಟಿವಿ ಕಲಾವಿದರ ಸಂಘ (CINTAA) ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಸತೀಶ್ ಶಾ ಅವರಿಗೆ ಗೌರವ ಸಲ್ಲಿಸಿದೆ. X ಪೋಸ್ಟ್‌ನಲ್ಲಿ “ಸತೀಶ್ ಶಾ ಜಿ (1985 ರಿಂದ ಸದಸ್ಯ) ಅವರ ನಿಧನಕ್ಕೆ CINTAA ತನ್ನ ಸಂತಾಪ ವ್ಯಕ್ತಪಡಿಸುತ್ತದೆ” ಎಂದು ಬರೆಯಲಾಗಿದೆ.
ಸತೀಶ್ ಶಾ ಅವರ ಪತ್ನಿ ವಿನ್ಯಾಸಕರಾದ ಮಧು ಶಾ. ಸತೀಶ್ ಕೊನೆಯ ಬಾರಿಗೆ 2014 ರ ಚಲನಚಿತ್ರ ‘ಹಂಶಕಲ್ಸ್’ ನಲ್ಲಿ ಕಾಣಿಸಿಕೊಂಡರು.
#WATCH | On the demise of veteran actor-comedian Satish Shah, Filmmaker Ashoke Pandit says," Satish Shah's health deteriorated in the afternoon, after which he was taken to Hinduja hospital. He was suffering from a kidney-related ailment. His mortal remains are in Hinduja… pic.twitter.com/bON8TM8LsW
— ANI (@ANI) October 25, 2025
Feeling extremely sad to share that we’ve lost a great artist & my dearest friend of over 40 years. It’s hard to believe—I had spoken to him just two days ago. Satish Bhai, you will truly be missed. Your immense contribution to film and television will never be forgotten. 🙏🏽🕊️ pic.twitter.com/IXuXI1AYhA
— Johny Lever (@iamjohnylever) October 25, 2025
CINTAA expresses its condolences on the demise of Satish Shah ji (member since 1985)
— CINTAA_Official (@CintaaOfficial) October 25, 2025
#cintaa #condolence #restinpeace #rip
. @poonamdhillon @dparasherdp @itsupasanasingh @HemantPandeyJi_ @ImPuneetIssar @rishimukesh @bolbedibol @iyashpalsharma @SahilaChaddha @actormanojjoshi… pic.twitter.com/Y0NTyEN0jJ
