ಸರ್ಕಾರಿ ಕಚೇರಿ ಮುಂದೆ ಪ್ರತಿಭಟಿಸ್ತಿದ್ದರ ಮೇಲೆ ಜೇನುನೊಣಗಳು ದಾಳಿ ಮಾಡಿರೋ ಘಟನೆ ಚಂಡೀಗಡನಲ್ಲಿ ನಡೆದಿದೆ. ಹರಿಯಾಣ ಸರ್ಕಾರದ ಇ-ಟೆಂಡರಿಂಗ್ ನೀತಿಗೆ ಸಂಬಂಧಿಸಿದಂತೆ ತಮ್ಮ ಬೇಡಿಕೆಗಳ ಕುರಿತು ಚಂಡೀಗಢ-ಪಂಚಕುಲ ಹೌಸಿಂಗ್ ಬೋರ್ಡ್‌ನಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದ ಸರಪಂಚ್‌ಗಳಿಗೆ ಶುಕ್ರವಾರ ಮುಂಜಾನೆ ಜೇನುನೊಣಗಳು ಕಚ್ಚಿರುವ ವಿಡಿಯೋ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ಜೇನುನೊಣಗಳು ಪ್ರತಿಭಟನಾ ಸ್ಥಳದಲ್ಲಿದ್ದವರ ಮೇಲೆ ದಾಳಿ ಮಾಡಿವೆ. ಕೆಲವರು ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬ್ಯಾರಿಕೇಡ್ ಹಾರಿ ಪಾರಾಗಿದ್ದಾರೆ. ಹಲವರಿಗೆ ಜೇನುಹುಳಗಳ ದಾಳಿಯಿಂದ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಪ್ರತಿಭಟನಾಕಾರರು, ಅಧಿಕಾರಿಗಳು ನಮಗೆ ಸ್ಥಳದಲ್ಲೇ ಚುಚ್ಚುಮದ್ದು ಕೊಡಿಸುವ ವ್ಯವಸ್ಥೆ ಮಾಡಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ ಎಂದು ದೂಷಿಸಿದ್ದಾರೆ. ಇದೊಂದು ಷಡ್ಯಂತ್ರ ಎಂದು ಆರೋಪಿಸಿ, ಉದ್ದೇಶಪೂರ್ವಕವಾಗಿ ಸರ್ಕಾರದ ಅಧಿಕಾರಿಗಳು ಪ್ರತಿಭಟನಾ ಸ್ಥಳದ ಬಳಿ ಜೇನುಗೂಡುಗಳಿಗೆ ಕಲ್ಲು ಹೊಡೆದು ನಮ್ಮ ಮೇಲೆ ದಾಳಿ ಮಾಡುವಂತೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಹರಿಯಾಣದಲ್ಲಿ ಕಳೆದೆರಡು ತಿಂಗಳಿಂದ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಕಾಮಗಾರಿಗಳಿಗೆ ಇ-ಟೆಂಡರ್ ಅಳವಡಿಕೆ ವಿರೋಧಿಸಿ ಸರಪಂಚ್‌ಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
https://twitter.com/ANI/status/1631685804618813441?ref_src=twsrc%5Etfw%7Ctwcamp%5Etweetembed%7Ctwterm%5E1631687319848890370%7Ctwgr%5E116b2e026ede062fd78a7684c8571056ac214918%7Ctwcon%5Es2_&ref_url=https%3A%2F%2Fwww.freepressjournal.in%2Fviral%2Fwatch-sarpanches-protesting-at-chandigarh-panchkula-housing-board-in-haryana-stung-by-honeybees