ಸ್ಯಾರಿ ಉಡುವ ನಾರಿಗೆ ತಿಳಿದಿರಲಿ ಪ್ರೀ ಪ್ಲೀಟಿಂಗ್ ಕಲೆ

ಹೆಣ್ಮಕ್ಕಳು ಕನ್ನಡಿ ಮುಂದೆ ನಿಂತರೆ ರೆಡಿ ಆಗೋಕೆ ಅರ್ಧ ದಿನವೇ ಬೇಕು ಎಂದು ರಾಗ ಹಾಡುವ ಹಾಡಿಗೆ ಬ್ರೇಕ್ ಹಾಕುತ್ತೆ ಸ್ಯಾರಿ ಪ್ರೀ ಪ್ಲೀಟಿಂಗ್ ಕಲೆ.
ಏನಿದು ಸ್ಯಾರಿ ಪ್ಲೀಟಿಂಗ್ ಅಂದ್ರೆ ಸೀರೆ ಉಡುವ ಮೊದಲೇ ಬೇಕಾದ ಹಾಗೆ ನೆರಿಗೆ, ಸೆರಗನ್ನು ಮಡಚಿಡುವ ಕಲೆ. ಇದರಿಂದ ಸೀರೆ ಉಡುವ ಸಮಯವನ್ನು ಉಳಿಸಬಹುದು. ಯಾವ ಗೋಜು, ಗೊಂದಲ ಇಲ್ಲದೆ ಸಲೀಸಾಗಿ ಸೀರೆ ಉಡಬಹುದು. ರೇಷ್ಮೆ ಸೀರೆ ಉಡುವ ಆಲೋಚನೆ ಇದ್ದರೆ ಅದನ್ನು ಮೊದಲೇ ಪ್ಲೀಟಿಂಗ್ ಮಾಡಿಟ್ಟರೆ ನಿಮ್ಮ ಅರ್ಧ ತಲೆ ಬಿಸಿ ಕಡಿಮೆ ಆದಂತೆ.

ಇತ್ತೀಚೆಗೆ ಈ ಸೀರೆ ಮಡಚಿಡುವ ಕಲೆ ಬಹಳ ಟ್ರೆಂಡ್ ಆಗಿದೆ. ಅಷ್ಟೇ ಮಹತ್ವ ಪಡೆದುಕೊಳ್ಳುತ್ತಿದೆ.

ಈ ಕಲೆಯನ್ನು ಹೇಳಿಕೊಡುವ ಅದೆಷ್ಟೋ ಆನ್ಲೈನ್/ ಆಫ್ಲೈನ್ ಕೋರ್ಸ್ಗಳಿವೆ. ಸ್ಯಾರಿ ಪ್ರೀ ಪ್ಲೀಟಿಂಗ್ ಕಲಿಸಿಕೊಡುವ ಮೂಲಕ, ಕಲಿತಿದ್ದನ್ನು ಹಲವರಿಗೆ ಸರ್ವೀಸ್ ಕೊಡುವ ಮೂಲಕ ಈಗ ಸಾವಿರಾರು ಹೆಣ್ಣು ಮಕ್ಕಳು ದುಡಿಮೆಯ ಮಾರ್ಗವಾಗಿಸಿಕೊಂಡಿದ್ದಾರೆ. ನಿಮಗೂ ಇಂತಹ ಕಲೆಯಲ್ಲಿ ಆಸಕ್ತಿ ಇದ್ದರೆ, ಕೇವಲ ಒಂದೆರಡು ದಿನಗಳಲ್ಲಿ ಕಲಿಯಬಹುದಾದ ಸ್ಯಾರಿ ಪ್ರೀ ಪ್ಲೀಟಿಂಗ್ ಕಲೆಯನ್ನು ಕಲಿತು ಮನೆಯಿಂದಲೇ ಆದಾಯ ಗಳಿಸಿ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read