ಬ್ರಿಸ್ಬೇನ್‌ ಬೀಚ್‌ ನಲ್ಲಿ ಮಿಂಚಿದ ಸಾರಾ ತೆಂಡುಲ್ಕರ್‌ | Watch Video

ಖ್ಯಾತ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಪುತ್ರಿ ಸಾರಾ ತೆಂಡುಲ್ಕರ್ ಇತ್ತೀಚೆಗೆ ಬ್ರಿಸ್ಬೇನ್‌ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಪಂದ್ಯವನ್ನು ವೀಕ್ಷಿಸುವ ಮೂಲಕ ತಮ್ಮ ಬ್ಯುಸಿ ಜೀವನದಿಂದ ರಿಫ್ರೆಶ್ ಆಗಿ ಬಂದಿದ್ದಾರೆ.

ಪಂದ್ಯದ ನಂತರ, ಅವರು ಸಾಮಾಜಿಕ ಮಾಧ್ಯಮದಲ್ಲಿ ಒಂದು ಆಕರ್ಷಕ ವೀಡಿಯೋವನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ಚೆರ್ರಿಗಳನ್ನು ಎಸೆದು ಅವುಗಳನ್ನು ತಮ್ಮ ಬಾಯಿಯಿಂದ ಹಿಡಿಯುವ ಮೂಲಕ ತಮ್ಮ ಕೀಟಲೆ ಸ್ವಭಾವವನ್ನು ತೋರಿಸಿದ್ದಾರೆ.

ವೀಡಿಯೋದಲ್ಲಿ, ಸಾರಾ ಷಾರ್ಟ್ ಡ್ರೆಸ್‌ನಲ್ಲಿ ಮಿಂಚಿದ್ದು, ಅವರ ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿದೆ. ಈ ಫೋಟೋ ನೋಡಿದವರು ಖಂಡಿತವಾಗಿಯೂ ಸಾರಾ ಬಾಲಿವುಡ್‌ನಲ್ಲಿ ಯಶಸ್ವಿ ನಾಯಕಿಯಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಇದರ ಮಧ್ಯೆ, ಸಾರಾ ಮತ್ತು ಕ್ರಿಕೆಟಿಗ ಶುಭಮನ್ ಗಿಲ್ ನಡುವಿನ ಲವ್‌ ಕುರಿತು ಗಾಸಿಪ್ ಹರಿದಾಡಲು ಪ್ರಾರಂಭಿಸಿವೆ. ಈ ಜೋಡಿಯು ಹಂಚಿಕೊಂಡ ಹಿಂದಿನ ಫೋಟೋಗಳು ಕೂಡ ಇದಕ್ಕೆ ಪುಷ್ಟಿ ನೀಡುವಂತಿದ್ದು, ಅವರ ಅಭಿಮಾನಿಗಳಲ್ಲಿ ಊಹಾಪೋಹಕ್ಕೆ ಕಾರಣವಾಗಿದೆ. ಆದಾಗ್ಯೂ, ಸಾರಾ ಮತ್ತು ಶುಭಮನ್ ಮಾತ್ರ ಯಾವುದೇ ಗುಟ್ಟು ಬಿಟ್ಟುಕೊಡದೆ ಮೌನಕ್ಕೆ ಶರಣಾಗಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read