BIG NEWS: ನೇಹಾ ಹಿರೇಮಠ ಹತ್ಯೆ ಪ್ರಕರಣ: ತಪ್ಪಿತಸ್ಥರನ್ನು ಎನ್ ಕೌಂಟರ್ ಮಾಡುವ ಕಾನೂನು ಜಾರಿ ತರಬೇಕು; ಸಚಿವ ಸಂತೋಷ್ ಲಾಡ್

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್, ಇಂಥಹ ಘಟನೆಗಳು ಯಾವುದೇ ದೇಶ, ರಾಜ್ಯ ಮತ್ತು ಸಮುದಾಯಗಳನ್ನು ತಲೆತಗ್ಗಿಸುವಂತೆ ಮಾಡುತ್ತವೆ. ಇಂತಹ ಕೃತ್ಯ ಖಂಡನೀಯ ಎಂದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸಂತೋಷ್ ಲಾಡ್, ಇಂಥಹ ಪ್ರಕರಣಗಳ ಬಗ್ಗೆ ಯಾರೇ ಆಗಲಿ ಸಂವೇದನಾಹೀನರಾಗಿ ಮಾತನಾಡಬಾರದು. ಇದು ರಾಜಕೀಯ ವಿಷಯಲ್ಲ. ವೃಥಾ ಕಮೆಂಟ್ ಗಳನ್ನು ಮಾಡುವ ಬದಲು ಹೆಣ್ಣುಮಗಳನ್ನು ಕಳೆದುಕೊಂಡಿರುವ ಆ ಕುಟುಂಬದ ನೋವಿನ ಬಗ್ಗೆ ಯೋಚಿಸಬೇಕು. ಅವರ ಮನೆಗೆ ಹೋಗಿ ದು:ಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬುವ ಕೆಲಸ ಮಾಡಿದರೆ ಅದು ಮೆಚ್ಚುಗೆಗೆ ಕಾರಣವಗುತ್ತದೆ ಎಂದು ಹೇಳಿದರು.

ಇಂಥಹ ಘಟನೆ ಮರುಕಳಿಸದಂತೆ ತಪ್ಪಿತಸ್ಥರನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡುವ ಕಾನೂನು ಜಾರಿ ತರುವ ಬಗ್ಗೆ ಸರ್ಕಾರ ಯೋಚಿಸಬೇಕು ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read