ಮದ್ಯದ ಅಮಲಿನಲ್ಲಿ ದೇವಸ್ಥಾನದ ಮುಂದೆಯೇ ಎಎಸ್ಐ ಡಾನ್ಸ್; ವಿಡಿಯೋ ವೈರಲ್ ಬಳಿಕ ಸಸ್ಪೆಂಡ್

ಪಾನಮತ್ತನಾಗಿದ್ದ ಸಹಾಯಕ ಸಬ್ ಇನ್ಸ್ಪೆಕ್ಟರ್ ಒಬ್ಬ ಅಮಲಿನಲ್ಲಿ ಸಮವಸ್ತ್ರದಲ್ಲಿಯೇ ದೇವಸ್ಥಾನದ ಮುಂದೆ ಕುಣಿದು ಕುಪ್ಪಳಿಸಿದ್ದು ಇದರ ವಿಡಿಯೋ ವೈರಲ್ ಆದ ಬಳಿಕ ಆತನನ್ನು ಸಸ್ಪೆಂಡ್ ಮಾಡಲಾಗಿದೆ.

ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸಾಂಥನಾಪರದ ಸಹಾಯಕ ಸಬ್ ಇನ್ಸ್ಪೆಕ್ಟರ್ ಕೆ.ಪಿ. ಶಾಜಿ ಅಮಾನತುಗೊಂಡ ಅಧಿಕಾರಿಯಾಗಿದ್ದಾರೆ.

ಪೂಪ್ಪಾರದ ದೇವಸ್ಥಾನದ ಉತ್ಸವ ಆಯೋಜನೆ ಸಂದರ್ಭದಲ್ಲಿ ಸಮವಸ್ತ್ರದಲ್ಲಿ ಆಗಮಿಸಿದ್ದ ಈತ ನೃತ್ಯ ಮಾಡಿದ್ದ. ಇದರ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಬಳಿಕ ತನಿಖೆ ನಡೆಸಲಾಗಿತ್ತು.

ತನಿಖೆ ವೇಳೆ ಸಹಾಯಕ ಸಬ್ ಇನ್ಸ್ಪೆಕ್ಟರ್ ಶಾಜಿ ಕರ್ತವ್ಯ ಲೋಪ ಎಸಗಿರುವುದು ಸ್ಪಷ್ಟವಾದ ಹಿನ್ನೆಲೆಯಲ್ಲಿ ಎರ್ನಾಕುಲಂ ಡಿಐಜಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read