ಸಂಜು ಸ್ಯಾಮ್ಸನ್ ಭರ್ಜರಿ ಶತಕ: ದಕ್ಷಿಣ ಆಫ್ರಿಕಾ ಗೆಲುವಿಗೆ 297 ರನ್ ಗುರಿ ನೀಡಿದ ಭಾರತ

 ಪಾರ್ಲ್: ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಸಂಜು ಸ್ಯಾಮ್ಸನ್ ಅವರ ಶತಕದ ನೆರವಿನಿಂದ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿದೆ.

ಪಾರ್ಲ್ ನ ಬೋಲ್ಯಾಂಡ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಪರವಾಗಿ ರಜತ್ ಪಾಟೀದಾರ್ 22, ಸಾಯಿ ಸುದರ್ಶನ್ 10, ಸಂಜು ಸ್ಯಾಮ್ಸನ್ 108, ಕೆಎಲ್ ರಾಹುಲ್ 21, ತಿಲಕ್ ವರ್ಮಾ 52, ರಿಂಕು ಸಿಂಗ್ 38, ಅಕ್ಷರ್ ಪಟೇಲ್ 1, ವಾಷಿಂಗ್ಟನ್ ಸುಂದರ್ 14, ಆರ್ಶ್ ದೀಪ್ ಸಿಂಗ್ ಅಜೇಯ 7, ಆವೇಶ್ ಖಾನ್ ಅಜೇಯ 1 ರನ್ ಗಳಿಸಿದರು.

ದಕ್ಷಿಣ ಆಫ್ರಿಕಾ ಪರವಾಗಿ ಬೇರುನ್ ಹೆಂಡ್ರಿಕ್ಸ್ 3, ನಾಂದ್ರೆ ಬರ್ಗರ್ 2 ವಿಕೆಟ್ ಪಡೆದರು. 297 ರನ್ ಗೆಲುವಿನ ಗುರಿ ಪಡೆದ ದಕ್ಷಿಣಾ ಆಫ್ರಿಕಾ ಪರ ರೀಜಾ ಹೆಂಡ್ರಿಕ್ಸ್, ಟೋನಿ ಡಿ ಜೋರ್ಜಿ ಬ್ಯಾಟಿಂಗ್ ಆರಂಭಿಸಿದ್ದಾರೆ.

https://twitter.com/StarSportsIndia/status/1737842381440114873

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read