Video | ಸೆಲ್ಫಿ ತೆಗೆಯುವ ವೇಳೆ ಅಭಿಮಾನಿಯ ಕರೆ ಸ್ವೀಕರಿಸಿ ಮಾತನಾಡಿದ ಸಂಜು ಸ್ಯಾಮ್ಸನ್

ದೇಶವಾಸಿಗಳಿಗೆ ಕ್ರಿಕೆಟರುಗಳೆಂದರೆ ಅದೆಂಥಾ ಅಭಿಮಾನ & ಪ್ರೀತಿ ಇದೆ ಎಂದು ಹೇಳುತ್ತಾ ಹೋದರೆ ದಿನಗಳು ಬೇಕಾಗುತ್ತವೆ.

ಐಪಿಎಲ್ ತಂಡಗಳಲ್ಲಿ ಆಡಿ ಒಂದಷ್ಟು ಹೆಸರು ಮಾಡಿದರೂ ಸಾಕು, ಜನರು ಹುಚ್ಚೆದ್ದು ಆ ಆಟಗಾರರನ್ನು ಹಿಂಬಾಲಿಸುತ್ತಾರೆ. ಇನ್ನು ರಾಷ್ಟ್ರೀಯ ತಂಡದಲ್ಲಿ ಆಡುವ, ಐಪಿಎಲ್‌ನಲ್ಲಿ ತಮ್ಮ ಅದ್ಭುತ ಆಟದಿಂದ ಲೆಜೆಂಡ್‌ಗಳಾಗಿರುವ ಸಂಜು ಸ್ಯಾಮ್ಸನ್‌ರಂಥವರನ್ನು ಇನ್ನೆಷ್ಟರ ಮಟ್ಟಿಗೆ ಅಭಿಮಾನಿಗಳು ಇಷ್ಟ ಪಡೋದಿಲ್ಲ!

ಐಪಿಎಲ್ ಪಂದ್ಯವೊಂದು ಮುಗಿದ ಬಳಿಕ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳ ಕರೆ ಓಗೊಟ್ಟು ಪೆವಿಲಿಯನತ್ತ ಸಾಗಿ ಅವರೊಂದಿಗೆ ಸೆಲ್ಫೀ ತೆಗೆದುಕೊಳ್ಳುತ್ತಿದ್ದ ಸಂಜೂ ಸ್ಯಾಮ್ಸನ್, ಈ ವೇಳೆ ಅಭಿಮಾನಿಯೊಬ್ಬರ ಫೋನ್ ಕರೆ ಸ್ವೀಕರಿಸಿ ಮಾತನಾಡಿದ್ದಾರೆ.

“ಸಂಜೂ ಭಯ್ಯಾ ಕಾಲ್ ರಿಸೀವ್‌ ಮಾಡಿ ಮಾತನಾಡಿ,” ಎಂದು ಅಭಿಮಾನಿಗಳು ಒಕ್ಕೊರಲಿನಿಂದ ಕೇಳಿದಾಗ ಫೋನಿನಲ್ಲಿ ಮಾತನಾಡಿದ ಸ್ಯಾಮ್ಸನ್, “ಹಾ ಭಯ್ಯಾ! ಹೇಗಿದ್ದೀರಿ?” ಎಂದು ಕೇಳಿದ್ದಾರೆ.

ರಾಜಸ್ಥಾನ ರಾಯಲ್ಸ್ ತಂಡದ ನಾಯಕನ ಈ ನಡೆಯಿಂದ ಅಲ್ಲಿದ್ದ ಅಭಿಮಾನಿಗಳಿಗೆಲ್ಲಾ ಭಾರೀ ಖುಷಿಯಾಗಿ ’ಹೋ…..’ ಎಂದು ಚೀತ್ಕಾರ ಹಾಕಿದ್ದಾರೆ.

https://twitter.com/rajasthanroyals/status/1651305593200865280?ref_src=twsrc%5Etfw%7Ctwcamp%5Etweetembed%7Ctwterm%5E1651305593200865280%7Ctwgr%5E46b6b2d1cbbe6ac085dba1406507cd8fe4469cc3%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fsanju-samson-answers-fans-call-while-clicking-a-selfie-internet-calls-him-a-gem-2365973-2023-04-28

https://twitter.com/ntl_nitin/status/1651306663331377152?ref_src=twsrc%5Etfw%7Ctwcamp%5Etweetembed%7Ctwterm%5E1651306663331377152%7Ctwgr%5E46b6b2d1cbbe6ac085dba1406507cd8fe4469cc3%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fsanju-samson-answers-fans-call-while-clicking-a-selfie-internet-calls-him-a-gem-2365973-2023-04-28

https://twitter.com/anshuawasthi15/status/1651410281938178050?ref_src=twsrc%5Etfw%7Ctwcamp%5Etweetembed%7Ctwterm%5E1651410281938178050%7Ctwgr%5E46b6b2d1cbbe6ac085dba1406507cd8fe4469cc3%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fsanju-samson-answers-fans-call-while-clicking-a-selfie-internet-calls-him-a-gem-2365973-2023-04-28

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read