BREAKING : ಸಂದೇಶ್ ಖಾಲಿ ಪ್ರಕರಣ : ‘TMC’ ಪಕ್ಷದಿಂದ ‘ಶೇಖ್ ಶಹಜಹಾನ್’ 6 ವರ್ಷ ಅಮಾನತು

ನವದೆಹಲಿ: ಸಂದೇಶ್ ಖಾಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿಯಿಂದ ‘ಶೇಖ್ ಶಹಜಹಾನ್’ ರನ್ನು 6 ವರ್ಷ ಅಮಾನತು ಮಾಡಲಾಗಿದೆ.

ಹಲವಾರು ಮಹಿಳೆಯರ ಮೇಲೆ ಹಲವು ದಿನಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ಅವರ ಭೂಮಿಯನ್ನು ಕಸಿದುಕೊಂಡ ಸಂದೇಶ್ಖಾಲಿ ಪ್ರಕರಣದ ಪ್ರಮುಖ ಆರೋಪಿ ಶೇಖ್ ಶಹಜಹಾನ್ ಅವರನ್ನು ತೃಣಮೂಲ ಕಾಂಗ್ರೆಸ್ ಗುರುವಾರ ಅಮಾನತುಗೊಳಿಸಿದೆ.

ಪಶ್ಚಿಮ ಬಂಗಾಳ ಪೊಲೀಸರು ಶಹಜಹಾನ್ ಅವರನ್ನು ಬಂಧಿಸಿದ ಕೆಲವೇ ಗಂಟೆಗಳ ನಂತರ, ಪಕ್ಷವು ಶಹಜಹಾನ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಿಸುವ ನಿರ್ಧಾರವನ್ನು ಘೋಷಿಸಿತು.

ಸಂದೇಶ್ಖಾಲಿಯ ಟಿಎಂಸಿ ಮುಖಂಡ ಶೇಖ್ ಶಹಜಹಾನ್ ಅವರನ್ನು ನಿನ್ನೆ ತಡರಾತ್ರಿ ಬಂಧಿಸಲಾಗಿತ್ತು, ನಂತರ ಇಂದು ಬೆಳಗ್ಗೆ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಶೇಖ್ ಶಹಜಹಾನ್ ಅವರನ್ನು 10 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.

ಸರ್ ಬೇರಿಯಾ ಬಳಿ ತಡರಾತ್ರಿ ಷಹಜಹಾನ್ ನನ್ನು ಬಂಧಿಸಲಾಗಿದೆ. ಸಂದೇಶ್ ಖಾಲಿ ಪ್ರಕರಣ ಬಯಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ ಆತನನ್ನು 55 ದಿನಗಳ ಬಳಿಕ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಸಂದೇಶ ಖಾಲಿ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ಮತ್ತು ಟಿಎಂಸಿ ನಾಯಕ ಷಹಜಹಾನ್ ನನ್ನು ರಾಜ್ಯ ಇಲ್ಲವೇ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಯಾವುದೇ ತನಿಖಾ ಸಂಸ್ಥೆಗಳು ಬಂಧಿಸುವ ಅಧಿಕಾರವಿದೆ ಎಂದು ಕೊಲ್ಕತ್ತಾ ಹೈಕೋರ್ಟ್ ವಿಭಾಗೀಯ ಪೀಠ ಹೇಳಿದ್ದು, ಆತನನ್ನು ಬಂಧಿಸುವಂತೆ ಸೂಚನೆ ನೀಡಿತ್ತು. ಷಹಜಹಾನ್ ಬಗ್ಗೆ ಹತ್ತಾರು ಎಫ್ಐಆರ್ ದಾಖಲಿಸಿದ್ದರೂ ಬಂಧಿಸದ ಪೊಲೀಸರ ನಿರ್ಲಕ್ಷದ ಬಗ್ಗೆ ಕಿಡಿಕಾರಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read