ಸ್ಯಾಂಡಲ್ವುಡ್ ನಟಿ ಅನಿತಾ ಭಟ್ ಸಹೋದರ ಹೃದಯ ಸ್ತಂಭನದಿಂದ ವಿಧಿವಶ

ಸ್ಯಾಂಡಲ್ ವುಡ್ ನಟಿ ಅನಿತಾ ಭಟ್ ಅವರ ಸಹೋದರ ಹೃದಯ ಸ್ತಂಭನದಿಂದ ವಿಧಿವಶರಾಗಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಅನಿತಾ ಭಟ್ ಈ ವಿಷಯ ತಿಳಿಸಿದ್ದಾರೆ.

ಸಹೋದರನೊಂದಿಗಿರುವ ಬಾಲ್ಯದ ಚಿತ್ರ ಹಾಗೂ ಇತ್ತೀಚಿನ ಚಿತ್ರವನ್ನು ಅನಿತಾ ಭಟ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಒಡನಾಟ ಸ್ಮರಿಸಿಕೊಳ್ಳುವ ಮೂಲಕ ಭಾವುಕರಾಗಿದ್ದಾರೆ.

ನನ್ನ ಸಹೋದರ ಹೃದಯಸ್ತಂಭನದಿಂದ ನಮ್ಮನ್ನು ಅಗಲಿದ್ದು, ಈ ನೋವಿನ ಸಂಗತಿಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಾಗುತ್ತಿಲ್ಲ ಎಂದಿರುವ ಅನಿತಾ ಭಟ್, ಆತ ಇನ್ನೆಂದು ಹಿಂದಿರುವುದಿಲ್ಲ ಎಂಬ ಕಹಿ ಸತ್ಯವನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ ಎಂದಿದ್ದಾರೆ. ಅನಿತಾ ಭಟ್ ಅವರ ಸಹೋದರನ ನಿಧನಕ್ಕೆ ಆಪ್ತರು, ಚಿತ್ರರಂಗದ ಸ್ನೇಹಿತರು ಕಂಬನಿ ಮಿಡಿದಿದ್ದಾರೆ.

 

https://twitter.com/IamAnitaBhat/status/1645331870169829377?ref_src=twsrc%5Etfw%7Ctwcamp%5Etweetembed%7Ctwterm%5

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read