ಕಪಿಲ್ ಶರ್ಮಾ ಶೋನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್

Golden Star Ganesh starrer Galipatta 2 to commence on December 2 | Moviekoop

ನಟ ಗೋಲ್ಡನ್ ಸ್ಟಾರ್ ಗಣೇಶ್ ಸದ್ಯ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಕ್ರಿಕೆಟ್, ಶೋ ಅಂತಲೂ ಅನೇಕ ಕಾರ್ಯಕ್ರಮದಲ್ಲಿ ಇದ್ದಾರೆ. ಈ‌ ಮಧ್ಯೆ ನಟ ಗಣೇಶ್ ಕಪಿಲ್ ಶರ್ಮಾ ಶೋನಲ್ಲಿ ಭಾಗಿಯಾಗಿದ್ದಾರೆ.

ಬಾಲಿವುಡ್​ನ ಖ್ಯಾತ ಕಾಮಿಡಿಯಿನ್ ಕಪಿಲ್ ಶರ್ಮಾ ಅವರನ್ನು ಭೇಟಿ ಮಾಡಿದ್ದಾರೆ. ಈ ವಿಡಿಯೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅವರು ಒಂದು ದೊಡ್ಡ ಅಪ್​ಡೇಟ್ ನೀಡುವುದಾಗಿ ತಿಳಿಸಿದ್ದಾರೆ.

ಹೌದು, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಎಲ್ಲಾ ಕನಸುಗಳಿಗೆ ಅರ್ಥವಿದೆ ಎನ್ನುವ ವಾಕ್ಯದೊಂದಿಗೆ ವಿಡಿಯೋ ಆರಂಭ ಆಗುತ್ತದೆ. ಗಣೇಶ್ ಅವರು ಮೇಕಪ್ ಮಾಡಿಕೊಂಡು ಕಾರಿನಲ್ಲಿ ತೆರಳುತ್ತಾರೆ. ನಂತರ ಅವರು ಭೇಟಿ ಮಾಡೋದು ಕಪಿಲ್ ಶರ್ಮಾ. ನಂತರ ವಿಡಿಯೋ ಕೊನೆಯಲ್ಲಿ ಎಗ್ಸೈಟಿಂಗ್ ಆಗಿರುವ ವಿಚಾರ ಶೀಘ್ರದಲ್ಲೇ ಬರಲಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ವಿಡಿಯೋಗೆ ಕ್ಯಾಪ್ಶನ್ ನೀಡಿರುವ ಅವರು, ನನ್ನ ಫೇವರಿಟ್​ ಶೋನ ಭಾಗವಾಗುತ್ತಿರುವುದಕ್ಕೆ ಖುಷಿ ಇದೆ. ಕಪಿಲ್ ಶರ್ಮಾ ಸರ್ ಧನ್ಯವಾದ ಎಂದಿದ್ದಾರೆ.

ಹಿಂದೆ ಕನ್ನಡ ನಟರ ಪೈಕಿ ಸುದೀಪ್ ಮಾತ್ರ ಈ ಶೋನಲ್ಲಿ ಭಾಗವಹಿಸಿದ್ದರು. ಅದು ಎರಡು ಬಾರಿ ಈ ಶೋನಲ್ಲಿ ಸುದೀಪ್ ಇದ್ದಾರೆ. ಇದೀಗ ಈ ಶೋನಲ್ಲಿ ಕನ್ನಡದ ಖ್ಯಾತ ನಟ ಗಣೇಶ್ ಭಾಗವಹಿಸ್ತಾ ಇದ್ದಾರೆ. ಒಂದಿಷ್ಟು ಜನ ಅಭಿಮಾನಿಗಳು ಈ ವಿಡಿಯೋ ನೋಡಿ, ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2023 ಫೆಬ್ರವರಿ 18ರಿಂದ ಆರಂಭಗೊಳ್ಳುತ್ತಿದೆ. ಮಾರ್ಚ್​ 19ಕ್ಕೆ ಫೈನಲ್ ನಡೆಯಲಿದೆ. ಭಾರತ ಚಿತ್ರರಂಗದ ಅನೇಕ ಕಲಾವಿದರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರ ಸಲುವಾಗಿ ಅವರು ಕಪಿಲ್ ಶರ್ಮಾ ವೇದಿಕೆಗೆ ಹೋಗಿರಬಹುದು ಎಂದು ಹೇಳುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read