ಈಗಾಗಲೇ ತನ್ನ ಟೀಸರ್ ಮತ್ತು ಟ್ರೈಲರ್ ಮೂಲಕವೇ ಸಾಕಷ್ಟು ಸದ್ದು ಮಾಡಿರುವ ಸಂಯುಕ್ತ ಹೆಗಡೆ ಅಭಿನಯದ ‘ಕ್ರೀಮ್’ ಚಿತ್ರ ನಾಳೆ ರಾಜ್ಯದಾದ್ಯಂತ ಬಿಡುಗಡೆಗೆ ಸಜ್ಜಾಗಿದೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಸಂಯುಕ್ತ ಹೆಗಡೆ ವೇಶ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಅಗ್ನಿ ಶ್ರೀಧರ್ ಈ ಚಿತ್ರದ ಕಥೆ ಬರೆದಿದ್ದು, ಅಭಿಷೇಕ್ ಬಸಂತ್ ನಿರ್ದೇಶಿಸಿದ್ದಾರೆ. ಸಂವರ್ದಿನಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಡಿಕೆ ದೇವೇಂದ್ರ ನಿರ್ಮಾಣ ಮಾಡಿದ್ದಾರೆ. ಅಗ್ನಿ ಶ್ರೀಧರ್, ಸಂಯುಕ್ತ ಹೆಗಡೆ, ಅರುಣ್ ಸಾಗರ್, ರೋಷನ್ ಸೇರಿದಂತೆ ಮೊದಲಾದ ಕಲಾವಿದರು ಬಣ್ಣ ಹಚ್ಚಿದ್ದಾರೆ.
ರೋಹಿತ್ ಸಂಗೀತ ಸಂಯೋಜನೆ ನೀಡಿದ್ದು, ಆರ್ಯನ್ ಗೌಡ ಸಂಕಲನ, ಸನೋಜ್ ವೇಲಾಯುಧನ್ ಛಾಯಾಗ್ರಾಹಣ,ಅಗ್ನಿ ಶ್ರೀಧರ್ ಸಂಭಾಷಣೆ ಮತ್ತು ರಂಜಿತ್ ಶೆಟ್ಟಿ, ಪ್ರಭು ಸಾಹಸ ನಿರ್ದೇಶನವಿದೆ.