ವಿಚ್ಛೇದನದ ಬಳಿಕ ಮೊದಲ ಬಾರಿಗೆ ಮೌನ ಮುರಿದ ಸಮಂತಾ….!

ಸಮಂತಾ ಅವರ ಜೊತೆಗಿನ ವಿಚ್ಛೇದನದ ನಂತರ ನಾಗ ಚೈತನ್ಯ, ನಟಿ ಶೋಭಿತಾ ಧೂಲಿಪಾಲ ಅವರೊಂದಿಗೆ ವೈವಾಹಿಕ ಬದುಕಿಗೆ ಕಾಲಿಡಲು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಇದರ ಮಧ್ಯೆ ಸಮಂತಾ ರುತ್ ಪ್ರಭು, ನಾಗಚೈತನ್ಯರಿಂದ ವಿಚ್ಛೇದನ ಪಡೆದ ನಂತರ ತಾನು ಎದುರಿಸಿದ ಟ್ರೋಲಿಂಗ್‌ ಬಗ್ಗೆ ಇತ್ತೀಚೆಗೆ ಪ್ರಾಮಾಣಿಕವಾಗಿ ಮಾತನಾಡಿದ್ದಾರೆ. ಲೆಕ್ಕವಿಲ್ಲದಷ್ಟು ವದಂತಿಗಳಿಗೆ ಒಳಗಾಗಿದ್ದರೂ, ಸಮಂತಾ ಈವರೆಗೆ ಮೌನಕ್ಕೆ ಶರಣಾಗಿದ್ದರು. ಸಮಂತಾ ರುತ್ ಪ್ರಭು ಮತ್ತು ನಾಗಚೈತನ್ಯ 2021 ರಲ್ಲಿ ತಮ್ಮ ಪ್ರತ್ಯೇಕತೆಯನ್ನು ಘೋಷಿಸಿದ್ದರು.
ಪುರುಷ ಪ್ರಧಾನ ಈ ವ್ಯವಸ್ಥೆಯಲ್ಲಿ ಮಹಿಳೆಯರನ್ನೇ ಹೆಚ್ಚು ಗುರಿಯಾಗಿಸಿಕೊಳ್ಳಲಾಗುತ್ತದೆ. ಪುರುಷರು ತಪ್ಪು ಮಾಡಿದ್ದರೂ ಮಹಿಳೆಯರನ್ನೇ ಹೆಚ್ಚು ಹೊಣೆ ಮಾಡಲಾಗುತ್ತದೆ ಎಂದು ಸಮಂತಾ ಅಭಿಪ್ರಾಯಪಟ್ಟಿದ್ದಾರೆ.
ವಿಚ್ಛೇದನದ ಸಮಯದಲ್ಲಿ ತಮ್ಮ ಬಗ್ಗೆ ಅಸತ್ಯವಾದ ವಿಷಯಗಳನ್ನು ಹೇಗೆ ಹೇಳಲಾಗಿದೆ ಮತ್ತು ಇದು ಆನ್‌ಲೈನ್ ನಲ್ಲಿ ಟ್ರೋಲ್ ಮಾಡಲು ಹೇಗೆ ಕಾರಣವಾಯಿತು ಎಂಬುದನ್ನು ನಟಿ ಬಹಿರಂಗಪಡಿಸಿದ್ದಾರೆ. ನನ್ನ ಬಗ್ಗೆ ಸುಳ್ಳಿನ ಅನೇಕ ವಿಷಯಗಳನ್ನು ಹೇಳಲಾಗಿದೆ ಎಂದು ಹೇಳಿದ್ದಾರೆ.
ಸುಳ್ಳಿಗೆ ಪ್ರತಿಕ್ರಿಯಿಸುವುದರಿಂದ ಏನು ಲಾಭವಿದೆ ಎಂದು ತಮ್ಮನ್ನು ತಾವೇ ಕೇಳಿಕೊಂಡ ಅವರು, ನಿಮ್ಮ ಸ್ನೇಹಿತರು ಮತ್ತು ನಿಮ್ಮ ಕುಟುಂಬಕ್ಕೆ ಸತ್ಯ ತಿಳಿದರೆ ಸಾಕು ಎಂದು ವಿವರಿಸಿದ್ದಾರೆ.
ಸಮಂತಾ ಅವರೊಂದಿಗಿನ ವಿಚ್ಛೇದನದ ನಂತರ ನಾಗಚೈತನ್ಯ, ನಟಿ ಶೋಭಿತಾ ಧೂಲಿಪಾಲ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಬ್ಬರೂ ಆಗಸ್ಟ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಡಿಸೆಂಬರ್ 4 ರಂದು ಅನ್ನಪೂರ್ಣ ಸ್ಟುಡಿಯೋದಲ್ಲಿ ವಿವಾಹವಾಗಲಿದ್ದಾರೆ. ಚೈತನ್ಯ ಈ ವರ್ಷದ ಆಗಸ್ಟ್‌ನಲ್ಲಿ ಶೋಭಿತಾರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೊದಲು ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು.
Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read