BIG NEWS: ʼಸ್ವಾಮೀಜಿʼ ಕಾಲಿಗೆ ಬಿದ್ದು ದುಡ್ಡು ಪಡೆದ ಪೊಲೀಸರು ; ವಿಡಿಯೋ ವೈರಲ್‌ ಬಳಿಕ ʼವರ್ಗಾವಣೆʼ

ಬಾಗಲಕೋಟೆ: ಸಮವಸ್ತ್ರದಲ್ಲೇ ಪೊಲೀಸರು ಸಿದ್ದನಕೊಳ್ಳ ಶಿವಕುಮಾರ ಸ್ವಾಮೀಜಿ ಕಾಲಿಗೆ ನಮಸ್ಕಾರ ಮಾಡಿ, ಹಣ ಪಡೆದಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಇದರಿಂದ ತುಂಬಾ ಚರ್ಚೆ ಕೂಡ ಆಗಿತ್ತು. ಸಮವಸ್ತ್ರದಲ್ಲಿ ಸ್ವಾಮೀಜಿಗೆ ನಮಸ್ಕಾರ ಮಾಡೋದು ಸರಿ, ಆದ್ರೆ ದುಡ್ಡು ಕೂಡ ಪಡೆದಿದ್ದು ಎಷ್ಟು ಸರಿ ಅಂತಾ ಜನ ಪ್ರಶ್ನೆ ಮಾಡಿದ್ರು. ಈಗ ಅವರ ಮೇಲೆ ಪೊಲೀಸ್ ಇಲಾಖೆ ಕ್ರಮ ತಗೊಂಡಿದೆ. ಆರು ಪೊಲೀಸರನ್ನು ವರ್ಗಾವಣೆ ಮಾಡಲಾಗಿದೆ.

ಆರು ಪೊಲೀಸರನ್ನು ಆಡಳಿತಾತ್ಮಕ ಕಾರಣದಿಂದ ವರ್ಗಾವಣೆ ಮಾಡಲಾಗಿದೆ ಅಂತಾ ಬಾಗಲಕೋಟೆ ಎಸ್​ಪಿ ಅಮರನಾಥ ರೆಡ್ಡಿ ಹೇಳಿದ್ದಾರೆ.

ಬಾದಾಮಿಯಿಂದ ಬೇರೆ ಬೇರೆ ಪೊಲೀಸ್ ಸ್ಟೇಷನ್‌ಗಳಿಗೆ ವರ್ಗಾವಣೆ ಮಾಡಲಾಗಿದೆ. ಎಎಸ್​​ಐ ಡಿಜೆ ಶಿವಪುರ, ಎಎಸ್​​ಐ ಜಿಬಿ ದಳವಾಯಿ, ನಾಗರಾಜ ಅಂಕೋಲೆ, ಜಿಬಿ ಅಂಗಡಿ, ರಮೇಶ್ ಈಳಗೇರ, ರಮೇಶ್ ಹುಲ್ಲೂರು ವರ್ಗಾವಣೆ ಆಗಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read