’ದುಬೈ ಸೇಫ್, ಭಾರತದಲ್ಲಿ ಸಮಸ್ಯೆ ಇದೆ’ ಎಂದ ಸಲ್ಮಾನ್; ನೆಟ್ಟಿಗರಿಂದ ಭಾರೀ ಟ್ರೋಲ್

ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನಿಂದ ನಿರಂತರವಾಗಿ ಕೊಲೆ ಬೆದರಿಕೆಗಳು ಬರುತ್ತಿರುವುದಾಗಿ ಹೇಳಿಕೊಂಡಿರುವ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ವೈ+ ಭದ್ರತೆ ನೀಡಲಾಗಿದೆ.

ಖ್ಯಾತ ಪತ್ರಕರ್ತ ರಜತ್‌ ಶರ್ಮಾ ಆತಿಥ್ಯದ ’ಆಪ್ ಕೀ ಅದಾಲತ್‌’ ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿದ ಸಲ್ಮಾನ್ ಖಾನ್, ಕೊಲೆ ಬೆದರಿಕೆಗಳು ಹೆಚ್ಚುತ್ತಿರುವ ಕಾರಣ ತಮಗೆ ಭಾರತಕ್ಕಿಂತ ದುಬಾಯ್ ಸುರಕ್ಷಿತವೆನಸುತ್ತಿದೆ ಎಂದಿದ್ದಾರೆ. ‌

ಗ್ಯಾಂಗ್ ಲೀಡರ್‌ನಿಂದ ಬಂದ ಕೊಲೆ ಬೆದರಿಕೆ ಕುರಿತು ಮಾತನಾಡಿದ ಸಲ್ಮಾನ್ ಖಾನ್, “ಅಭದ್ರತೆಗಿಂದ ಭದ್ರತೆ ವಾಸಿ. ಹೌದು ಭದ್ರತೆ ಇದೆ. ಆದರೆ ಈಗ ರಸ್ತೆಯಲ್ಲಿ ಒಬ್ಬನೇ ಬೈಸಿಕಲ್ ತುಳಿಯುತ್ತಾ ಎಲ್ಲೆಂದರಲ್ಲಿ ಹೋಗಲು ಸಾಧ್ಯವಿಲ್ಲ,” ಎಂದಿದ್ದಾರೆ.

’ದುಬಾಯ್ ಸಂಪೂರ್ಣ ಸುರಕ್ಷಿತವಾಗಿದೆ. ಭಾರತದಲ್ಲೇ ಏನೋ ಸಮಸ್ಯೆ ಇದೆ,” ಎಂದು ಹೇಳುವ ಮೂಲಕ ನೆಟ್ಟಿಗರ ವ್ಯಂಗ್ಯಭರಿತ ಟ್ರೋಲ್‌ಗಳಿಗೆ ಆಹಾರವಾಗಿದ್ದಾರೆ ಸಲ್ಮಾನ್ ಖಾನ್.

“ಸರಿಯಾಗಿ ಹೇಳಿದ್ದೀರಿ ಭಾಯ್‌……. ಫುಟ್ಪಾತ್‌ನಲ್ಲಿ ಜನರು ಹಾಗೂ ಕಾಡಿನಲ್ಲಿ ಜಿಂಕೆ ಸಹ ಸುರಕ್ಷಿತವಾಗಿಲ್ಲ,” ಎಂದು ನೆಟ್ಟಿಗರೊಬ್ಬರು ಟ್ರೋಲ್ ಮಾಡಿದ್ದಾರೆ. “ಹಾಗಾದರೆ ದುಬಾಯ್‌ನಲ್ಲೇ ಹೋಗಿ ಇರಿ ನನ್ನ ಸಹೋದರ,” ಎಂದು ಮತ್ತೊಬ್ಬರು ಕುಟುಕಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read