ಜು. 23ರಿಂದ ಎರಡು ದಿನ ಹಾಲು, ಬೇಕರಿ ಉತ್ಪನ್ನ ಮಾರಾಟ ಬಂದ್: ತೆರಿಗೆ ನೋಟಿಸ್ ವಿರೋಧಿಸಿ ಸಣ್ಣ ವರ್ತಕರ ನಿರ್ಧಾರ

ಬೆಂಗಳೂರು: ವಾರ್ಷಿಕ 40 ಲಕ್ಷ ರೂಪಾಯಿ ವಹಿವಾಟು ನಡೆಸಿದ ಸಣ್ಣ ಉದ್ದಿಮೆದಾರರಿಗೆ ಏಕಾಏಕಿ ನೋಟಿಸ್ ಜಾರಿ ಮಾಡಿದ ವಾಣಿಜ್ಯ ತೆರಿಗೆ ಇಲಾಖೆ ಕ್ರಮ ವಿರೋಧಿಸಿ ಜುಲೈ 23ರಿಂದ ಎರಡು ದಿನ ಬಂದ್ ಆಚರಿಸಲು ರಾಜ್ಯಕಾರ್ಮಿಕ ಪರಿಷತ್ ನಿರ್ಧರಿಸಿದೆ.

ಹಾಲು, ಬೇಕರಿ ಉತ್ಪನ್ನಗಳು, ಬೀಡಿ, ಸಿಗರೇಟ್ ಮಾರಾಟ ಮಾಡುವುದನ್ನು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಅಧ್ಯಕ್ಷ ರವಿ ಶೆಟ್ಟಿ ಬೈಂದೂರು ಮಾತನಾಡಿ, ಜುಲೈ 23, 24ರಂದು ಕೇಂದ್ರದ ವಿರುದ್ಧ ಇಡೀ ರಾಜ್ಯದಲ್ಲಿ ದೊಡ್ಡ ಮಟ್ಟದ ಹೋರಾಟ ಕೈಗೊಳ್ಳಲಾಗುವುದು. ಜು. 25ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲಾಗುವುದು ಎಂದು ಹೇಳಿದ್ದಾರೆ.

ತೆರಿಗೆ ಕಟ್ಟುವಂತೆ ಏಕಾಏಕಿ ನೋಟಿಸ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಎರಡು ದಿನ ಹಾಲು, ಬೇಕರಿ ಉತ್ಪನ್ನಗಳ ಮಾರಾಟ ಇರುವುದಿಲ್ಲ. ಯಾವುದೇ ಮುನ್ಸೂಚನೆ ನೀಡದೆ ತೆರಿಗೆ ನೋಟಿಸ್ ನೀಡಲಾಗಿದೆ. ಈ ಕ್ರಮ ಸರಿಯಲ್ಲ, ಸಾವಿರ, ಲಕ್ಷಾಂತರ ರೂಪಾಯಿ ಬೆಲೆಬಾಳುವ ಅಂಗಡಿಗಳಿಗೆ ಭಾರಿ ಮೊತ್ತದ ತೆರಿಗೆ ಪಾವತಿಗೆ ನೋಟಿಸ್ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.

ಸಭೆಯಲ್ಲಿ ಚಾಲಕರ ಸಂಘದ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ, ಕನ್ನಡ ಒಕ್ಕೂಟದ ಅಧ್ಯಕ್ಷ ನಟರಾಜ್ ಬೊಮ್ಮಸಂದ್ರ, ತೆರಿಗೆ ಮಾಹಿತಿದಾರ ಸುಬ್ರಹ್ಮಣ್ಯ, ಗೋವಿಂದ ಬಾಬು ಪೂಜಾರಿ ಮೊದಲಾದವರು ಭಾಗವಹಿಸಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read