ಮೊದಲ ದಿನದ ಗಳಿಕೆಯಲ್ಲಿ ಪ್ರಭಾಸ್ ‘ಸಲಾರ್’ ದಾಖಲೆ

‘ಸಲಾರ್’ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಮೊದಲ ದಿನವೇ ದೊಡ್ಡ ದಾಖಲೆ ಬರೆದಿದೆ. ಪ್ರಭಾಸ್ ಅಭಿನಯದ ‘ಸಲಾರ್’ ಮೊದಲ ದಿನ 100 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡು ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಇದು ಭಾರತೀಯ ನಟರೊಬ್ಬರ ಮೊದಲ ದಿನದ ಗಳಿಕೆಯಲ್ಲಿ ಮೊದಲನೆಯದು ಎಂದು ಹೇಳಲಾಗಿದೆ.

‘ಸಲಾರ್’ ಬಾಕ್ಸ್ ಆಫೀಸ್‌ ಕಲೆಕ್ಷನ್ ನಲ್ಲಿ ದಾಖಲೆಗಳನ್ನೆಲ್ಲಾ ಹಿಂದಿಕ್ಕಿದೆ. ಮೊದಲ ದಿನದ ಕಲೆಕ್ಷನ್ ಎಲ್ಲಾ ಮುನ್ಸೂಚನೆಗಳು ಮತ್ತು ಕಲ್ಪನೆಗಳನ್ನು ಮೀರಿದೆ. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ ಮೊದಲ ದಿನವೇ ದಾಖಲೆ ಮುರಿಯುವ ಪ್ರದರ್ಶನ ಕಾಣುತ್ತಿದೆ.

ಚಿತ್ರವು ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂಪಾಯಿಗಳ ಜೊತೆಗೆ ಆರಂಭಿಕ ದಾಖಲೆಯನ್ನು ದಾಖಲಿಸಬಹುದು. ಡಿಸೆಂಬರ್ 22 ರ ಶುಕ್ರವಾರ ‘ಸಲಾರ್’ ಬಿಡುಗಡೆಯಾಗಿದ್ದು, ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಬಂದಿದೆ. ಚಿತ್ರವು 22.38 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡುವ ಮೂಲಕ ಮೊದಲ ದಿನದ ಮುಂಗಡ ಬುಕಿಂಗ್ ನಲ್ಲಿ 48.94 ಕೋಟಿ ರೂ. ಗಳಿಸಿದೆ. ಶುಕ್ರವಾರ ಟಿಕೆಟ್ ಕೌಂಟರ್‌ಗಳು ತೆರೆಯುತ್ತಿದ್ದಂತೆ ಸ್ಪಾಟ್-ಬುಕಿಂಗ್ ಜಗತ್ತನ್ನು ತಲೆಕೆಳಗಾಗಿಸಿದೆ. ತೆಲುಗು ರಾಜ್ಯಗಳ ಬಹುತೇಕ ಎಲ್ಲಾ ಥಿಯೇಟರ್‌ಗಳಲ್ಲಿ ಹೌಸ್‌ಫುಲ್ ಬೋರ್ಡ್‌ಗಳನ್ನು ಹಾಕಲಾಯಿತು. ‘ಸಲಾರ್’ ಆಂಧ್ರ, ತೆಲಂಗಾಣದಲ್ಲಿ ಬರೋಬ್ಬರಿ 70 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆಯಿದೆ, ಭಾರತದಾದ್ಯಂತ ಒಟ್ಟು 95 ಕೋಟಿ ರೂ. ಗಳಿಕೆ ಕಂಡಿದೆ. ಒಟ್ಟಾರೆ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read