ಸಾಯಿ ಪಲ್ಲವಿ ‘ಸೀತೆ’ ಆದರೂ, ದೀಪಿಕಾ ಚಿಖಾಲಿಯಾಗೆ ಸಿಕ್ಕಿಲ್ಲ ಚಾನ್ಸ್ !

ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅಭಿನಯದ ‘ರಾಮಾಯಣ’ ಚಿತ್ರದ ಬಗ್ಗೆ ಸದ್ಯ ಎಲ್ಲೆಡೆ ಕುತೂಹಲ ಮನೆ ಮಾಡಿದೆ. ಈ ನಡುವೆ, 80ರ ದಶಕದ ಜನಪ್ರಿಯ ‘ರಾಮಾಯಣ’ ಧಾರಾವಾಹಿಯಲ್ಲಿ ಸೀತಾಮಾತೆಯ ಪಾತ್ರ ನಿರ್ವಹಿಸಿದ್ದ ನಟಿ ದೀಪಿಕಾ ಚಿಖಾಲಿಯಾ ಅವರು ಹೊಸ ಚಿತ್ರದಲ್ಲಿ ನಟಿಸುತ್ತಾರೆಯೇ ಎಂಬ ಪ್ರಶ್ನೆ ಎದ್ದಿತ್ತು. ಆದರೆ, ಈ ಕುರಿತು ದೀಪಿಕಾ ಸ್ವತಃ ಸ್ಪಷ್ಟನೆ ನೀಡಿದ್ದಾರೆ.

ETimes TV ಜೊತೆಗಿನ ಸಂದರ್ಶನದಲ್ಲಿ ದೀಪಿಕಾ ಚಿಖಾಲಿಯಾ, “ನನ್ನನ್ನು ಯಾರೂ ಸಂಪರ್ಕಿಸಿಲ್ಲ. ಬಹುಶಃ ನನ್ನೊಂದಿಗೆ ಮಾತನಾಡಲು ಅವರು ಆಸಕ್ತಿ ಹೊಂದಿಲ್ಲ ಎಂದು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.

ಸೀತಾ ಪಾತ್ರದಲ್ಲಿ ಅಭಿನಯಿಸಿದ ನಂತರ, ‘ರಾಮಾಯಣ’ಕ್ಕೆ ಸಂಬಂಧಿಸಿದ ಯಾವುದೇ ಪಾತ್ರದಲ್ಲಿ ನಟಿಸಲು ತಮಗೆ ಆಸಕ್ತಿಯಿಲ್ಲ ಎಂದು ದೀಪಿಕಾ ತಿಳಿಸಿದ್ದಾರೆ. “ಒಮ್ಮೆ ನಾನು ಸೀತಾ ಪಾತ್ರವನ್ನು ನಿರ್ವಹಿಸಿದ ನಂತರ, ರಾಮಾಯಣದಲ್ಲಿ ಬೇರೆ ಯಾವುದೇ ಪಾತ್ರವನ್ನು ನಾನು ಮಾಡಲಾರೆ ಎಂದು ಅನಿಸುತ್ತದೆ. ಇದರ ಬಗ್ಗೆ ನನಗೆ ಖಚಿತವಿಲ್ಲ” ಎಂದಿದ್ದಾರೆ. ಆದರೆ, ಒಂದು ವೇಳೆ ‘ಮಹಾಭಾರತ’ ಅಥವಾ ‘ಶಿವ ಪುರಾಣ’ದಂತಹ ಧಾರಾವಾಹಿಗಳಲ್ಲಿ ಅವಕಾಶ ಸಿಕ್ಕಿದ್ದರೆ, ಖಂಡಿತಾ ಯೋಚಿಸುತ್ತಿದ್ದೆ ಎಂದು ಅವರು ಹೇಳಿದ್ದಾರೆ.

1987ರ ರಾಮಾನಂದ ಸಾಗರ್ ನಿರ್ದೇಶನದ ‘ರಾಮಾಯಣ’ ಧಾರಾವಾಹಿಯಲ್ಲಿ ದೀಪಿಕಾ ಚಿಖಾಲಿಯಾ ಅವರ ಸೀತಾ ಪಾತ್ರವು ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಅವರ ಅಭಿನಯವು ಪ್ರಾಮಾಣಿಕ ಮತ್ತು ಸೌಮ್ಯವಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read