BIG NEWS: ಬೆಂಗಳೂರಿನ ಕೆರೆಯಲ್ಲಿ ಮೀನುಗಳ ಮಾರಣಹೋಮ

ಬೆಂಗಳೂರು: ಬೆಂಗಳೂರಿನ ಕೆರೆಯೊಂದರಲ್ಲಿ ಲಕ್ಷಾಂತರ ಮೀನುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಕಳೆದ ಎರಡು ಮೂರು ದಿನಗಳಿಂದ ಕೆರೆಯಲ್ಲಿ ಮೀನು ಸಾವನ್ನಪ್ಪುತ್ತಿದ್ದು, ದುರ್ವಾಸನೆಯಿಂದಾಗಿ ಅಕ್ಕಪಕ್ಕದ ನಿವಾಸಿಗಳಿಗೆ ವಾಸಿಸುವುದು ಕಷ್ಟವಾಗಿದೆ.

ಮಹದೇವಪುರ ಕ್ಷೇತ್ರದ ಸಾದರಮಂಗಲ ಕೆರೆಯಲ್ಲಿ ಇದ್ದಕ್ಕಿದ್ದಂತೆ ಮೀನುಗಳು ಸಾವನ್ನಪ್ಪುತ್ತಿದ್ದು, ಕೆರೆಯ ದಡದಲ್ಲಿ ಮೀನುಗಳ ಮಾರಣಹೋಮವೇ ನಡೆದಿದೆ. ಕಲುಷಿತ ನೀರು ಕೆರೆಗೆ ಸೇರುತ್ತಿರುವುದರಿಂದ ಮೀನುಗಳು ಸಾವನ್ನಪ್ಪುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಕೆರೆಯಲ್ಲಿ ನೀರಿಲ್ಲದೇ ಅದಾಗಲೇ ಕೆರೆ ಒಣಗುತ್ತಿದೆ. ಈ ಮಧ್ಯೆ ಫ್ಯಾಕ್ಟರಿ, ಅಪಾರ್ಟ್ ಮೆಂಟ್ ಗಳ ನೀರು ಸಾದರಮಂಗಲ ಕೆರೆ ಸೇರುತ್ತಿವೆ. ಇದರಿಂದಾಗಿ ಇದ್ದ ಅಲ್ಪಸ್ವಲ್ಪ ನೀರು ಕೂಡ ಸಂಪೂರ್ಣ ಕಲುಷಿತಗೊಂಡಿದ್ದು, ಕೆರೆಯಲ್ಲಿ ಮೀನುಗಳು ಸಾವನ್ನಪ್ಪುತ್ತಿವೆ ಎಂಬುದು ಸ್ಥಳೀಯರ ವಾದ.

ಕೆರೆ ನಿರ್ವಹಣಾ ಸಿಬ್ಬಂದಿಗಳು ಸತ್ತ ಮೀನುಗಳನ್ನು ಹೊರತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read