ತನ್ನ ಮದುವೆಗೆ ಇಡೀ ವಿಮಾನವನ್ನೇ ಬುಕ್‌ ಮಾಡಿದ ವರ….!

ಅನೇಕ ಜನರು ತಮ್ಮ ನೆಚ್ಚಿನ ಸೆಲೆಬ್ರಿಟಿಗಳಿಂದ ಪ್ರೇರಿತವಾದ ಅತಿರಂಜಿತ ಮತ್ತು ಶ್ರೀಮಂತ ವಿವಾಹದ ಕನಸು ಕಾಣುತ್ತಾರೆ. ಇದಕ್ಕಾಗಿ ಮಿತಿಯನ್ನೂ ದಾಟಿ ಹೋಗುತ್ತಾರೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್‌ ಆಗಿದೆ.

ಒಬ್ಬ ವರನು ಕುಟುಂಬ ಸದಸ್ಯರು ಮತ್ತು ಸಂಬಂಧಿಕರಿಗೆ ತನ್ನ ಮದುವೆಗೆ ಹಾಜರಾಗಲು ಸಂಪೂರ್ಣ ವಿಮಾನವನ್ನು ಕಾಯ್ದಿರಿಸಿರುವ ವಿಡಿಯೋ ಇದಾಗಿದೆ.

ಉತ್ಸಾಹಭರಿತ ಅತಿಥಿಗಳಿಂದ ತುಂಬಿದ ವಿಮಾನದ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿದೆ. ವೀಡಿಯೊವನ್ನು ದಿ ಶುಭ್ ವೆಡ್ಡಿಂಗ್ ಹೆಸರಿನ ಇನ್‌ಸ್ಟಾಗ್ರಾಮ್ ಪುಟವು ಹಂಚಿಕೊಂಡಿದೆ.

ವೈರಲ್ ವೀಡಿಯೊದಲ್ಲಿ, ವರನ ಕುಟುಂಬ ಮತ್ತು ಸಂಬಂಧಿಕರು ವಿಮಾನದೊಳಗೆ ಕೈ ಬೀಸುವುದು, ಹರ್ಷೋದ್ಗಾರ ಮಾಡುವುದು ಮತ್ತು ಹೃದಯದ ಆಕಾರವನ್ನು ತೋರಿಸುವುದನ್ನು ನೋಡಬಹುದು.

ಈ ವಿಮಾನದಲ್ಲಿ ವರ ಭುವನ್ ಕೂಡ ಕಾಣಿಸುತ್ತಾರೆ. ಇಡೀ ವಿಮಾನವನ್ನು ಮದುವೆಗಾಗಿ ಬುಕ್‌ ಮಾಡಲಾಗಿದೆ ಎಂದು ಶೀರ್ಷಿಕೆಯಲ್ಲಿ ವಿವರಣೆ ನೀಡಲಾಗಿದೆ.

ಈ ಬಗ್ಗೆ ಪರ-ವಿರೋಧದ ಚರ್ಚೆ ಪ್ರಾರಂಭವಾಗಿದೆ. ಈತ ಮಾಡಿದ್ದು ಸರಿಯಿದೆ, ಜೀವನದಲ್ಲಿ ಒಮ್ಮೆಯಾಗುವ ಮದುವೆಯನ್ನು ನೆನಪಿನಲ್ಲಿ ಇಡುವ ಹಾಗೆ ಮಾಡಬೇಕು ಎಂದು ಕೆಲವರು ಬರೆದಿದ್ದಾರೆ. ಇನ್ನು ಹಲವರು ಇದಕ್ಕೆ ವಿರುದ್ಧವಾಗಿದ್ದು, ಕಷ್ಟಪಟ್ಟು ದುಡಿಯದೇ ಹಣ ಸಂಪಾದನೆ ಮಾಡಿದರೆ ಹೀಗೆಯೇ ಆಗುವುದು, ಖರ್ಚಿಗೂ ಒಂದು ಮಿತಿ ಬೇಕು ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read