ನಾನು ಮರಳಿನಲ್ಲಿ ಅ, ಆ, ಕಲಿಯುತ್ತಿದ್ದಾಗ ‘S.M ಕೃಷ್ಣ’ ವಿದೇಶದಲ್ಲಿ ಓದುತ್ತಿದ್ದರು : ‘CM ಸಿದ್ದರಾಮಯ್ಯ’ ಭಾವುಕ ಪೋಸ್ಟ್.!

ಬೆಂಗಳೂರು : ಮಾಜಿ ಸಿಎಂ ಎಸ್ ಎಂ ಕೃಷ್ಣ ವಿಧಿವಶರಾಗಿದ್ದು, ಎಸ್ ಎಂ ಕೃಷ್ಣ ಅವರ ಬಗ್ಗೆ ಸಿಎಂ ಸಿದ್ದರಾಮಯ್ಯ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

ನಾನು ಮರಳಿನಲ್ಲಿ ಅ, ಆ, ಕಲಿಯುತ್ತಿದ್ದಾಗ ಎಸ್.ಎಂ ಕೃಷ್ಣ ವಿದೇಶದಲ್ಲಿ ಓದುತ್ತಿದ್ದರು. ಬಹುಶಃ ನಾನು ಮರಳಿನ ಮೇಲೆ ಅಕ್ಷರಾಭ್ಯಾಸ ಮಾಡುತ್ತ, ವೀರ ಮಕ್ಕಳ ಕುಣಿತ ಕಲಿಯುವ ಹೊತ್ತಲ್ಲಿ ಎಸ್.ಎಂ. ಕೃಷ್ಣರವರು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕೃಷ್ಣರವರ ವೈಶಿಷ್ಟ್ಯವೆಂದರೆ ವಿದೇಶದಲ್ಲಿ ಶಿಕ್ಷಣ ಪಡೆದರೂ ಊರಿಗೆ ಮರಳಿ ಮಣ್ಣಿನ ಮಗನಾದರು. ದ್ವೇಷದ ರಾಜಕಾರಣದಿಂದ ಬಹುದೂರವೇ ಇದ್ದ ಎಸ್.ಎಂ. ಕೃಷ್ಣ ಅವರೊಬ್ಬ ಸಜ್ಜನಿಕೆಯ ಜಂಟಲ್ಮೆನ್ ರಾಜಕಾರಣಿ. ಈ ಕಾರಣಕ್ಕಾಗಿಯೇ ಅಜಾತಶತ್ರುವಾಗಿ ನಮ್ಮ ನೆನಪುಗಳಲ್ಲಿ ಶಾಶ್ವತವಾಗಿರಲಿದ್ದಾರೆ ಎಂದು ಸಿಎಂ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಜಾಗತಿಕ ಭೂಪಟದಲ್ಲಿ ಬೆಂಗಳೂರನ್ನು ಸಿಲಿಕಾನ್ ವ್ಯಾಲಿಯಾಗಿಸುವ ನಿಟ್ಟಿನಲ್ಲಿ ಎಸ್.ಎಂ. ಕೃಷ್ಣರವರ ಕೊಡುಗೆ ಅಪಾರ. ವಿಧಾನಸಭೆ, ವಿಧಾನಪರಿಷತ್, ಲೋಕಸಭೆ, ರಾಜ್ಯಸಭೆ ಹೀಗೆ ಎಲ್ಲವನ್ನೂ ಪ್ರತಿನಿಧಿಸಿದ್ದ, ಮುಖ್ಯಮಂತ್ರಿಯಾಗಿ, ವಿಧಾನಸಭೆಯ ಸಭಾಧ್ಯಕ್ಷರಾಗಿ, ಕೇಂದ್ರ ಸಚಿವರಾಗಿ, ರಾಜ್ಯಪಾಲರಾಗಿ ಅನುಪಮ ಸೇವೆ ಸಲ್ಲಿಸಿದ್ದ ಅಪರೂಪರ ರಾಜಕಾರಣಿ ಕೃಷ್ಣರವರು ಸಾರ್ವಜನಿಕ ಜೀವನದಲ್ಲಿ ಮೇಲ್ಪಂಕ್ತಿಯನ್ನು ಹಾಕಿಕೊಟ್ಟು ನಿರ್ಗಮಿಸಿದ್ದಾರೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read