ಸ್ವೀಡನ್ ಕರವಾಳಿಯಲ್ಲಿ ಕಾಣಿಸಿಕೊಂಡ ರಷ್ಯನ್ ’ಬೇಹುಗಾರ’ ತಿಮಿಂಗಿಲ

ರಷ್ಯನ್ ನೌಕಾಪಡೆಯಿಂದ ಬೇಹುಗಾರಿಕಾ ತರಬೇತಿ ಪಡೆದಿದೆ ಎಂದು ಶಂಕಿಸಲಾದ ಬೆಲುಗಾ ತಿಮಿಂಗಿಲವೊಂದು ಸ್ವೀಡಿಶ್ ಕರಾವಳಿಯತ್ತ ಕಂಡು ಬಂದಿದೆ. 2019ರಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಈ ತಿಮಿಂಗಿಲ ಆಗ ನಾರ್ವೇ ಕರಾವಳಿಯಲ್ಲಿ ಕಂಡು ಬಂದಿತ್ತು.,

ಸ್ವೀಡನ್‌ನ ನೈಋತ್ಯ ಕರಾವಳಿಯ ಹನ್ನೆಬೋಸ್ಟ್ರಾಮಡ್‌ ಬಳಿ ಅಡ್ಡಾಡುತ್ತಿದ್ದ ವೇಳೆ ಈ ತಿಮಿಂಗಿಲ ಜಲಜೀವಶಾಸ್ತ್ರ ತಜ್ಞರ ಕಣ್ಣಿಗೆ ಬಿದ್ದಿದೆ. ಈ ತಿಮಿಂಗಿಲದ ವಯಸ್ಸು 13-14 ವರ್ಷವಾಗಿದ್ದು, ಸಂಗಾತಿಗಳ ಹುಡುಕಾಟದಲ್ಲಿ ಅಲೆದಾಡುತ್ತಿದೆ ಎಂದು ಶಂಕಿಸಲಾಗಿದೆ.

ಈ ತಿಮಿಂಗಿಲದ ಕುತ್ತಿಗೆಯ ಬಳಿ ಪ್ಲಾಸ್ಟಿಕ್ಮ ಕ್ಲಾಸ್ಪ್‌ಗಳಿದ್ದು, ಅದರಲ್ಲಿ ಸ್ಪೈ ಕಾಮೆರಾ ಅಳವಡಿಸಿರುವ ಶಂಕೆ ಇದೆ.

ಈ ವಿಚಾರವಾಗಿ ಮಾಸ್ಕೋ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read