ರಷ್ಯಾದಲ್ಲಿ ಅಲ್ಲೋಲ ಕಲ್ಲೋಲ: ಪುಟಿನ್ ವಿರುದ್ಧ ದಂಗೆ ಎದ್ದ ವ್ಯಾಗ್ನರ್ ಪಡೆ

ಮಾಸ್ಕೋದ ಮಿಲಿಟರಿ ನಾಯಕತ್ವ ಮತ್ತು ಖಾಸಗಿ ಸೇನಾ ಗುಂಪಿನ ವ್ಯಾಗ್ನರ್ ನಡುವಿನ ಸಂಘರ್ಷ ಶನಿವಾರ ಬಹಿರಂಗ ದಂಗೆಗೆ ಕಾರಣವಾಗಿದೆ.

ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್, ರಷ್ಯಾದ ಮಿಲಿಟರಿ ನಾಯಕತ್ವವು ಶಿಬಿರದ ಮೇಲಿನ ಸ್ಟ್ರೈಕ್ ನಲ್ಲಿ ದೊಡ್ಡ ಸಂಖ್ಯೆಯ ತನ್ನ ಕೂಲಿ ಪಡೆಗಳ ಕೊಂದಿದೆ ಎಂದು ಆರೋಪಿಸಿದ್ದು, ಪ್ರತೀಕಾರದ ಪ್ರತಿಜ್ಞೆ ಮಾಡಿದ್ದಾರೆ.

ಪ್ರಾದೇಶಿಕ ಗವರ್ನರ್‌ಗಳು ನಿವಾಸಿಗಳನ್ನು ರಸ್ತೆಗಳಿಂದ ದೂರವಿರಿಸುವಂತೆ ಒತ್ತಾಯಿಸಿದ್ದರಿಂದ ಭದ್ರತಾ ಪಡೆಗಳು ಪಶ್ಚಿಮ ರಶಿಯಾದಾದ್ಯಂತ ಪರದಾಡಿವೆ. ವ್ಯಾಗ್ನರ್ ಕೂಲಿ ಸೈನಿಕರು ಮಿಲಿಟರಿ ಸೈಟ್‌ ಗಳನ್ನು ವಶಪಡಿಸಿಕೊಳ್ಳುತ್ತಿದ್ದಂತೆ, ರಷ್ಯಾದ ಸೈನ್ಯವು ಫಿರಂಗಿ ದಾಳಿಯೊಂದಿಗೆ ಪ್ರತೀಕಾರ ತೀರಿಸಿಕೊಳ್ಳತೊಡಗಿದೆ.

ಮಿಲಿಟರಿ ದಂಗೆಯ ಪ್ರಯತ್ನದ ಆರೋಪವನ್ನು ಪ್ರಿಗೊಜಿನ್ ಈ ಹಿಂದೆ ನಿರಾಕರಿಸಿದ್ದರೂ, ರಷ್ಯಾದ ಅಧ್ಯಕ್ಷ ಪುಟಿನ್ ವಿರುದ್ಧ ಮೊದಲ ಬಾರಿಗೆ ನೇರವಾಗಿ ಮಾತನಾಡಿದ್ದಾರೆ.

ವ್ಯಾಗ್ನರ್ ಮುಖ್ಯಸ್ಥ ಮತ್ತು ಕೂಲಿ ಉದ್ಯಮಿ ಯೆವ್ಗೆನಿ ಪ್ರಿಗೊಜಿನ್ ಅವರ ದಂಗೆಯನ್ನು ಬೆನ್ನಿಗೆ ಇರಿತ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಕರೆದಿದ್ದು, ಹೊಣೆಗಾರರನ್ನು ಶಿಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದರು.

ದಕ್ಷಿಣ ರಷ್ಯಾದ ನಗರವಾದ ರೊಸ್ಟೊವ್-ಆನ್-ಡಾನ್‌ ಉದ್ವಿಗ್ನಗೊಂಡಿದೆ. ಸಶಸ್ತ್ರ ದಂಗೆ ಶಮನಗೊಳ್ಳುವ ಯಾವುದೇ ಲಕ್ಷಣ ಕಂಡುಬಂದಿಲ್ಲ. ಪುಟಿನ್ ಅವರ ದೂರದರ್ಶನದ ಭಾಷಣದ ಕುರಿತು ಪ್ರತಿಕ್ರಿಯಿಸಿದ ಪ್ರಿಗೊಜಿನ್, ಅಧ್ಯಕ್ಷರು ತಮ್ಮನ್ನು ದೇಶದ್ರೋಹಿ ಎಂದು ಕರೆದಿರುವುದು ತಪ್ಪಾಗಿದೆ ಎಂದು ಹೇಳಿದ್ದಾರೆ.

ಇದಾದ ನಂತರದಲ್ಲಿ ನೈಋತ್ಯ ರಷ್ಯಾದಲ್ಲಿರುವ ವೊರೊನೆಝ್ ನಗರದಲ್ಲಿನ ರಷ್ಯಾದ ಮಿಲಿಟರಿ ಸೌಲಭ್ಯಗಳ ಮೇಲೆ ನಿಯಂತ್ರಣ ಸಾಧಿಸಿದ್ದೇವೆ ಎಂದು ವ್ಯಾಗ್ನರ್ ಗುಂಪು ಮಾಹಿತಿ ನೀಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read