ರಷ್ಯಾದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. 22 ವರ್ಷದ ಯುವತಿಯೊಬ್ಬಳು 13ನೇ ಅಂತಸ್ತಿನಿಂದ ಕೆಳಗೆ ಬಿದ್ದರೂ ಪವಾಡಸದೃಶ್ಯ ರೀತಿಯಲ್ಲಿ ಜೀವಾಪಾಯದಿಂದ ಪಾರಾಗಿದ್ದಾಳೆ. ಈ ಘಟನೆಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.
Daily wrap ಈ ಕುರಿತಂತೆ ವರದಿ ಮಾಡಿದ್ದು, ಇದರ ವಿಡಿಯೋ ಜುಲೈ 23 ರಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ಈಗಾಗಲೇ ಲಕ್ಷಾಂತರ ವೀಕ್ಷಣೆಗಳು ಬಂದಿವೆ.
ವಿಡಿಯೋದಲ್ಲಿ ಕಂಡು ಬಂದಂತೆ 13ನೇ ಅಂತಸ್ತಿನಿಂದ ಬೀಳುವ ಈ ಯುವತಿ ಕಟ್ಟಡದ ಮುಂಭಾಗದ ಹುಲ್ಲಿನ ಹಾಸಿನ ಮೇಲೆ ಬಿದ್ದಿದ್ದಾಳೆ. ಅವಳಿಗೆ ಸಣ್ಣಪುಟ್ಟ ಗಾಯಗಳಷ್ಟೇ ಆಗಿದ್ದು ಕೂಡಲೇ ಎದ್ದು ಕುಳಿತಿದ್ದಾಳೆ. ಆಕೆಯನ್ನು ಈಗ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಾವುದೇ ಜೀವಾಪಾಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ.
22-year-old girl in Russia falls from the 13th floor of a high-rise building, and survives.
According to a report, she was hospitalised with minor injuries, no fractures. #Russia pic.twitter.com/d0sGCzfC0o
— Vani Mehrotra (@vani_mehrotra) July 23, 2024