ʼಲವ್‌ ಮ್ಯಾರೇಜ್‌ʼ ಆದ ಜೋಡಿಯನ್ನು ಬೆನ್ನಟ್ಟಿದ ಕುಟುಂಬಸ್ಥರು; ರಕ್ಷಣೆ ಕೋರಿ ಪೊಲೀಸ್‌ ಠಾಣೆಗೆ ಓಡಿದ ದಂಪತಿ ವಿಡಿಯೋ ವೈರಲ್

ರಾಜಸ್ಥಾನದ ಜಲೋರ್ ನಗರದಲ್ಲಿ ಪ್ರಾಣ ರಕ್ಷಣೆಗೆ ಪ್ರೇಮಿಗಳಿಬ್ಬರು ಪೊಲೀಸ್‌ ಠಾಣೆಗೆ ಓಡ್ತಿರುವ ದೃಶ್ಯ ವೈರಲ್‌ ಆಗಿದೆ. ದಂಪತಿ ಮುಂದೆ ಓಡ್ತಿದ್ದರೆ ಅವರ ಹಿಂದೆ ಕುಟುಂಬಸ್ಥರು ಓಡ್ತಿದ್ದಾರೆ. ಇವರು ಪ್ರೀತಿಸಿ ಮದುವೆಯಾಗಿದ್ದರು. ಆದ್ರೆ ಕುಟುಂಬ ಮದುವೆಗೆ ಒಪ್ಪಿಗೆ ನೀಡಿರಲಿಲ್ಲ. ಪ್ರಾಣ ರಕ್ಷಣೆಗಾಗಿ ಇವರು ಪೊಲೀಸ್‌ ಬಳಿ ಓಡ್ತಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.

ಜಲೋರ್ನ ಬೀದಿಗಳಲ್ಲಿ ಓಡಿದ ದಂಪತಿ, ಪೊಲೀಸ್ ವರಿಷ್ಠಾಧಿಕಾರಿ ಎಸ್ಪಿ  ಕಚೇರಿಗೆ ತೆರಳಿ ರಕ್ಷಣೆ ಕೇಳಿದ್ದಾರೆ. ಪ್ರೇಮ ವಿವಾಹದ ನಿರ್ಧಾರದಿಂದ ದಂಪತಿ ಕುಟುಂಬಗಳು ಅಸಮಾಧಾನಗೊಂಡಿತ್ತು.

ಎಸ್ಪಿ ಕಚೇರಿಗೆ ತೆರಳದಂತೆ ತಡೆಯಲು ಕುಟುಂಬಸ್ಥರು ಯತ್ನಿಸಿದ್ದಾರೆ. ಆದ್ರೆ ಅವರಿಂದ ತಪ್ಪಿಸಿಕೊಂಡ ದಂಪತಿ, ಎದ್ನೋ ಬಿದ್ನೋ ಅಂತ ಓಡಿದ್ದಾರೆ. ಮುಂದೆನಾಯ್ತು ಎನ್ನುವ ಮಾಹಿತಿ ಬಹಿರಂಗವಾಗಿಲ್ಲ.  ಆದರೆ ದಂಪತಿಗಳು ರಸ್ತೆಯಲ್ಲಿ ಓಡುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಘಟನೆ ಬಗ್ಗೆ  ವ್ಯಾಪಕ ಆಸಕ್ತಿಯನ್ನು ಹುಟ್ಟುಹಾಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read