Madhya Pradesh: ರುದ್ರಾಕ್ಷಿ ಪಡೆಯಲು ನೂಕು ನುಗ್ಗಲು; ಅಸ್ವಸ್ಥಗೊಂಡ ಮಹಿಳೆ – ಮಗು ಸಾವು

ಶಿವರಾತ್ರಿ ಅಂಗವಾಗಿ ರುದ್ರಾಕ್ಷಿ ವಿತರಿಸಲು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಿಪರೀತ ನೂಕು ನುಗ್ಗಲು ಉಂಟಾದ ಪರಿಣಾಮ ಅಸ್ವಸ್ಥಗೊಂಡು ಓರ್ವ ಮಹಿಳೆ ಹಾಗೂ ಮೂರು ವರ್ಷದ ಮಗು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ರಾಜ್ಯ ರಾಜಧಾನಿಯಿಂದ 40 ಕಿಮೀ ದೂರದಲ್ಲಿರುವ Sehore ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕುಬರೇಶ್ವರ್ ಧಾಮ್ ನಲ್ಲಿ ಪಂಡಿತ್ ಪ್ರದೀಪ್ ಮಿಶ್ರಾ ರುದ್ರಾಕ್ಷಿ ವಿತರಣೆಯನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಎರಡು ಲಕ್ಷ ಜನರು ಆಗಮಿಸಬಹುದೆಂಬ ನಿರೀಕ್ಷೆಯಿದ್ದು ಆದರೆ ಇದನ್ನು ಮೀರಿ 10 ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದರು.

ಈ ವೇಳೆ ಭಾರಿ ನೂಕುನುಗ್ಗಲು ಉಂಟಾಗಿದ್ದು ವಿವೇಕ್ ವಿನೋದ್ ಭಟ್ ಎಂಬವರ ಮೂರು ವರ್ಷದ ಮಗು ಹಾಗೂ ಓರ್ವ ಮಹಿಳೆ ಅಸ್ವಸ್ಥಗೊಂಡಿದ್ದರು. ಇವರುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read