ರೈತರಿಗೆ ಮುಖ್ಯ ಮಾಹಿತಿ: ಸರ್ಕಾರಿ ಸೌಲಭ್ಯ ಪಡೆಯಲು ಪಹಣಿಗೆ ಆಧಾರ್ ಜೋಡಣೆ ಕಡ್ಡಾಯ ಆದೇಶ

ಬೆಂಗಳೂರು: ಸರ್ಕಾರದ ಸೌಲಭ್ಯಗಳನ್ನು ರೈತರು ಸುಲಭವಾಗಿ ಪಡೆದುಕೊಳ್ಳಲು ಆರ್.ಟಿ.ಸಿ. ದಾಖಲೆಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಆರ್.ಟಿ.ಸಿ. ದಾಖಲೆಗೆ ಆಧಾರ್ ಸಂಖ್ಯೆ ಜೋಡಿಸುವ ಕಾರ್ಯಕ್ಕೆ ಸರ್ಕಾರ 7 ವರ್ಷದ ಹಿಂದೆ ಚಾಲನೆ ನೀಡಿದ್ದು, ಬಹಳಷ್ಟು ರೈತರು ಆಧಾರ್ ಸಂಖ್ಯೆ ಜೋಡಿಸಿದ್ದರು. ಈಗ ಮತ್ತೆ ಆಧಾರ್ ಸಂಖ್ಯೆ ನೀಡುವ ಅನಿವಾರ್ಯತೆ ಎದುರಾಗಿದೆ.

ಆಧಾರ್ ಸಂಖ್ಯೆ ಜೋಡಣೆಗಾಗಿ ಹೊಸ ತಂತ್ರಾಂಶ ಸಿದ್ಧಪಡಿಸಿದ್ದು, ಇನ್ನು ಮುಂದೆ ಸರ್ಕಾರದ ಸೌಕರ್ಯ ಪಡೆಯಲು ರೈತರು ಹೊಸ ಪದ್ದತಿ ಪಾಲಿಸುವುದು ಕಡ್ಡಾಯವಾಗಿರುತ್ತದೆ. ಗ್ರಾಮ ಲೆಕ್ಕಾಧಿಕಾರಿಗಳಿಗೆ ಆರ್.ಟಿ.ಸಿ.ಗೆ ಆಧಾರ್ ಜೋಡಣೆ ಕಾರ್ಯ ಜವಾಬ್ದಾರಿ ನೀಡಲಾಗಿದೆ.

ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ವಿವಿಧ ಯೋಜನೆ ಸಹಾಯಧನ ಪಡೆದುಕೊಳ್ಳಲು ಫ್ರೂಟ್ ತಂತ್ರಾಂಶ ಅನುಷ್ಠಾನಗೊಂಡಿದ್ದು, ಬಹುತೇಕ ರೈತರು ಆಧಾರ್ ಸಂಖ್ಯೆಯನ್ನು ತಂತ್ರಾಂಶಕ್ಕೆ ಜೋಡಿಸಿದ್ದಾರೆ. ಈಗ ಕಂದಾಯ ಇಲಾಖೆಯ ತಂತ್ರಾಂಶಕ್ಕೆ ಆಧಾರ್ ಸಂಖ್ಯೆ ಜೋಡಿಸುವಂತೆ ಸರ್ಕಾರ ಪ್ರತ್ಯೇಕ ಸೂಚನೆ ನೀಡಿದೆ.

2024ರ ಫೆಬ್ರವರಿ 12ರಂದು ಈ ಕುರಿತಾಗಿ ಸರ್ಕಾರ ಆದೇಶ ಹೊರಡಿಸಿದ್ದು, ಜಿಲ್ಲಾಧಿಕಾರಿಗಳು ಹೊಸ ಪದ್ದತಿ ಅನುಷ್ಠಾನಕ್ಕೆ ಸೂಕ್ತ ಕ್ರಮ ವಹಿಸಲು ತಿಳಿಸಲಾಗಿದೆ. ಸರಳ ತಂತ್ರಾಂಶದಲ್ಲಿ ರೈತರ ಆರ್.ಟಿ.ಸಿ. ದಾಖಲೆಗೆ ಆಧಾರ್ ಸಂಖ್ಯೆ ಜೋಡಿಸುವ ಕಾರ್ಯದ ಜವಾಬ್ದಾರಿಯನ್ನು ಗ್ರಾಮ ಲೆಕ್ಕಾಧಿಕಾರಿಗೆ ವಹಿಸಲಾಗಿದೆ. ರೈತರಿಗೆ ಸೂಕ್ತ ತಿಳಿವಳಿಕೆ ನೀಡಿ ಆಧಾರ್ ಸಂಖ್ಯೆ ಪಡೆದು ಆರ್‌ಟಿಸಿ ದಾಖಲೆಗೆ ವಿವರವಾದ ಮಾಹಿತಿಯೊಂದಿಗೆ ಜೋಡಿಸುವಂತೆ ಸರ್ಕಾರದಿಂದ ಆದೇಶ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read