ಬೆಂಗಳೂರು: ಆರ್.ಎಸ್.ಎಸ್ ಬೆನ್ನಲ್ಲೇ ಭಜರಂಗದಳಕ್ಕೂ ಅಂಕುಶ ಬೀಳಲಿದೆಯೇ? ಎಂಬ ಚರ್ಚೆ ಆರಂಭವಾಗಿದೆ. ಆರ್.ಎಸ್.ಎಸ್ ಮಾತ್ರವಲ್ಲ ಭಜರಂಗದಳವನ್ನೂ ನಿಷೇಧ ಮಾಡಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಒತ್ತಾಯಿಸಿದ್ದಾರೆ.
ಭಜರಂಗದಳವನ್ನು ನಿಷೇಧಿಸಬೇಕು ಎಂದು ಬಿ.ಕೆ.ಹಿಪ್ರಸಾದ್ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅಗತ್ಯವಿದ್ದರೆ ಬ್ಯಾನ್ ಮಾಡಬೇಕು ಎಂದಿದ್ದಾರೆ. 2023ರ ಚುನಾವಣೆ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ಬ್ಯಾನ್ ಮಾಡುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಭಜರಂಗದಳ ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈಗಾಗಲೇ ಸರ್ಕಾರಿ ಜಾಗ, ಸಾರ್ವಜನಿಕ ಸ್ಥಳಗಳು, ಉದ್ಯಾನವನ, ಸರ್ಕಾರಿ ಶಾಲೆ, ಅನುದಾನಿತ ಶಾಲೆಗಳಲ್ಲಿ ಆರ್.ಎಸ್.ಎಸ್, ಸಂಘ-ಸಂಸ್ಥೆಗಳ ಚಟುವಟಿಕೆ, ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಿರುವ ಬೆನ್ನಲ್ಲೇ ಭಜರಂಗದಳಕ್ಕೂ ನಿರ್ಬಂಧ ಹೇರಳು ಸರ್ಕಾರ ಮುಂದಾಗುತ್ತಿದೆಯೇ ಎಂಬ ಚರ್ಚೆ ಆರಂಭವಾಗಿದೆ.