BIG NEWS: ಕಲ್ಯಾಣ ಕಾರ್ಯಕ್ರಮಗಳಿಗೆ ದತ್ತಾಂಶ ಬೇಕು: ಜಾತಿ ಗಣತಿಗೆ RSS ಬೆಂಬಲ: ರಾಜಕೀಯ ದುರ್ಬಳಕೆ ಬಗ್ಗೆ ಎಚ್ಚರಿಕೆ

ಪಾಲಕ್ಕಾಡ್: ಜಾತಿ ಗಣತಿಗೆ ಆರ್.ಎಸ್.ಎಸ್. ಬೆಂಬಲ ಸೂಚಿಸಿದೆ. ಜಾತಿ ಗಣತಿ ಸೂಕ್ಷ್ಮ ಸಂಗತಿಯಾಗಿದ್ದು, ಕಲ್ಯಾಣ ಕಾರ್ಯಕ್ರಮಗಳಿಗೆ ಜಾತಿಗಣತಿಯ ದತ್ತಾಂಶಗಳು ಬಳಕೆಯಾಗಬೇಕೆ ಹೊರತು ಚುನಾವಣೆ ಲಾಭಕ್ಕೆ ದುರ್ಬಳಕೆ ಆಗಬಾರದು ಎಂದು ಎಚ್ಚರಿಸಿದೆ.

ದೇಶವ್ಯಾಪಿ ಜಾತಿಗಣತಿ ನಡೆಸುವಂತೆ ಕಾಂಗ್ರೆಸ್ ನೇತೃತ್ವದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಸರ್ಕಾರವನ್ನು ಒತ್ತಾಯಿಸುತ್ತಿವೆ. ಇದೇ ಸಂದರ್ಭದಲ್ಲಿ ಆರ್.ಎಸ್.ಎಸ್.ನಿಂದ ಮಹತ್ವದ ಹೇಳಿಕೆ ಹೊರಬಿದ್ದಿದೆ.

ಕೇರಳದ ಪಾಲಕ್ಕಾಡ್ ನಲ್ಲಿ ನಡೆಯುತ್ತಿರುವ ಮೂರು ದಿನಗಳ ಸಮನ್ವಯ ಬೈಠಕ್ ನಲ್ಲಿ ಆರ್.ಎಸ್.ಎಸ್. ಪ್ರಚಾರ ಪ್ರಮುಖ ಸುನಿಲ್ ಅಂಬೇಕರ್ ಅವರು ಮಾತನಾಡಿ, ಹಿಂದೂ ಸಮಾಜಕ್ಕೆ ಜಾತಿ ಸಂಬಂಧಿತ ಅಂಶಗಳು ಸೂಕ್ಷ್ಮ ವಿಚಾರವೆನಿಸಿವೆ. ನಮ್ಮ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ಇದು ಮುಖ್ಯವಾಗಿದೆ. ಹಿಂದುಳಿದಿರುವ ನಿರ್ದಿಷ್ಟ ಸಮುದಾಯ ಅಥವಾ ಜಾತಿಗಳ ಏಳಿಗೆಗೆ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸರ್ಕಾರಕ್ಕೆ ದತ್ತಾಂಶಗಳ ಅಗತ್ಯವಿದೆ. ಈ ವಿಚಾರದಲ್ಲಿ ಜಾತಿಗಣತಿಗೆ ಆರ್.ಎಸ್.ಎಸ್. ಬೆಂಬಲವಿದೆ. ಆದರೆ, ಇದು ರಾಜಕೀಯ ಅಸ್ತ್ರವಾಗಿ ಬಳಕೆಯಾಗಬಾರದು. ಚುನಾವಣೆ ಲಾಭಕ್ಕೆ ದುರ್ಬಳಕೆಯಾಗಬಾರದು ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read