2.5 ಕೋಟಿ ರೂ. ನಗದು, 75 ಲಕ್ಷ ಮೌಲ್ಯದ ಕಾರು: ʼರಾಯಲ್ ವೆಡ್ಡಿಂಗ್ʼ ವಿಡಿಯೋ ವೈರಲ್

ಮೀರತ್‌ನಲ್ಲಿ ನಡೆದ ಅದ್ಧೂರಿ ವಿವಾಹದ ವೀಡಿಯೊ ಒಂದು ಭಾರೀ ವೈರಲ್‌ ಆಗಿದ್ದು, ಸಂಪತ್ತಿನ ಪ್ರದರ್ಶನಕ್ಕಾಗಿ ಎಲ್ಲರ ಗಮನ ಸೆಳೆದಿದೆ.

ಈ ವಿಡಿಯೋದಲ್ಲಿ ವಧುವಿನ ಕುಟುಂಬ 2.5 ಕೋಟಿ ರೂಪಾಯಿ ನಗದನ್ನು ವರನ ಕಡೆಯವರಿಗೆ ಹಸ್ತಾಂತರಿಸುತ್ತಿರುವುದು ಕಂಡು ಬರುತ್ತದೆ. ವಧುವಿನ ಸಂಬಂಧಿಕರು ವರನ ಪಾದರಕ್ಷೆ ತೆಗೆದುಕೊಳ್ಳುವ ಸಂಪ್ರದಾಯದ ಭಾಗವಾಗಿ ವರನ ಅತ್ತಿಗೆಗೆ 11 ಲಕ್ಷ ರೂಪಾಯಿಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ಅದೇ ರೀತಿ ನಿಕಾಹ್ ಸಮಾರಂಭಕ್ಕೆ ಚಾಲನೆ ನೀಡಿದ ಮೌಲ್ವಿಯವರಿಗೆ 11 ಲಕ್ಷ ರೂಪಾಯಿ, ಸ್ಥಳೀಯ ಮಸೀದಿಗೆ 8 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ ಎಂದು ಹೇಳಲಾಗಿದೆ.

ಮೀರತ್‌ನ NH-58 ಬಳಿ ಇರುವ ರೆಸಾರ್ಟ್‌ನಲ್ಲಿ ರೆಕಾರ್ಡ್ ಮಾಡಲಾದ ದೃಶ್ಯಾವಳಿಗಳು, ಸಮಾರಂಭದ ನಡುವೆ ನಗದು ತುಂಬಿದ ಸೂಟ್‌ಕೇಸ್‌ಗಳನ್ನು ಹಸ್ತಾಂತರಿಸುತ್ತಿರುವುದನ್ನು ಚಿತ್ರಿಸುತ್ತದೆ.

ವೀಡಿಯೋದಲ್ಲಿ ವ್ಯಕ್ತಿಯೊಬ್ಬರು “ಕಾರು ಖರೀದಿಸಲು 75 ಲಕ್ಷ ರೂಪಾಯಿ ನಗದು ನೀಡಲಾಗುತ್ತಿದೆ” ಎಂದು ಘೋಷಿಸುತ್ತಿರುವುದು ಕಂಡುಬಂದಿದೆ.

ಇದೇ ಸಂದರ್ಭದಲ್ಲಿ 8 ಲಕ್ಷ ರೂಪಾಯಿಯನ್ನು ಗಾಜಿಯಾಬಾದ್‌ನ ಮಸೀದಿಗೆ ದೇಣಿಗೆ ನೀಡಲಾಗಿದೆ ಎಂದು ಘೋಷಿಸಲಾಗಿದೆ. ಈ ಮೂಲಕ ವಧುವಿನ ಕಡೆಯವರು ಗಾಜಿಯಾಬಾದ್ ನಿವಾಸಿ ಎಂದು ಊಹಿಸಲಾಗಿದೆ.

ವೈರಲ್ ಮದುವೆಯ ವೀಡಿಯೊ ಚಿತ್ರೀಕರಣವನ್ನು ತಡೆಯುವ ಪ್ರಯತ್ನ ಕೂಡ ನಡೆದಿದ್ದು, ಆದರೆ ಒಬ್ಬ ವ್ಯಕ್ತಿ ಅದನ್ನು ನಿಲ್ಲಿಸುವ ಮೊದಲು ರಹಸ್ಯವಾಗಿ ರೆಕಾರ್ಡ್ ಮಾಡಿದ್ದಾನೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read