ಹೆಲ್ಮೆಟ್‌ ಇಲ್ಲದೆ ಬೈಕ್‌ ಓಡಿಸಿದ ಖೈದಿ; ಹಿಂದೆ ಕೂತ UP ಪೊಲೀಸ್‌ | Viral Video

ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ನಡೆದ ಘಟನೆಯೊಂದರಲ್ಲಿ ಪೊಲೀಸನೊಬ್ಬ ಅಪರಾಧಿಯನ್ನು ಕರೆದುಕೊಂಡು ಹೋಗುವ ವೇಳೆ ಆತನಿಗೆ ಬೈಕ್‌ ಓಡಿಸಲು ನೀಡಿದ್ದು, ತಾನು ಹೆಲ್ಮೆಟ್‌ ಧರಿಸಿ ಹಿಂದೆ ಕುಳಿತಿದ್ದಾರೆ. ಕೈಕೋಳ ಹೊಂದಿರುವ ಅಪರಾಧಿಗೆ ಹಗ್ಗದಿಂದ ಕಟ್ಟಿದ್ದು, ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಸಹ ಪ್ರಯಾಣಿಕರೊಬ್ಬರು ಈ ಘಟನೆಯನ್ನು ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿ ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ.

ಯುಪಿ ಪೋಲೀಸ್ ಹಿಂದೆ ಕುಳಿತಿದ್ದಾಗ ಅಪರಾಧಿ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಓಡಿಸುತ್ತಿರುವುದನ್ನು ವೀಡಿಯೊ ತೋರಿಸಿದೆ. ಆರೋಪಿ ಹೆಲ್ಮೆಟ್‌ ಇಲ್ಲದೆ ಸವಾರನ ಆಸನದಲ್ಲಿ ಕುಳಿತಿದ್ದರೆ ಪೊಲೀಸ್, ಹೆಲ್ಮೆಟ್ ಧರಿಸಿ ಪಿಲಿಯನ್ ರೈಡರ್ ಆಗಿದ್ದಾರೆ.

ವಾತಾವರಣದಲ್ಲಿ ತೀವ್ರ ಚಳಿ ಅನುಭವಿಸಿದ ಬಳಿಕ ಪೊಲೀಸ್, ಖೈದಿಗೆ ಬೈಕ್ ಓಡಿಸುವಂತೆ ಹೇಳಿರುವುದಾಗಿಹೇಳಲಾಗಿದೆ. ಮೈನ್‌ಪುರಿಯಿಂದ ಪೊಲೀಸ್ ಹೆಲ್ಮೆಟ್ ಧರಿಸಿ ಹಿಂದೆ ಸವಾರಿ ಮಾಡುತ್ತಿದ್ದಾಗ ಅಪರಾಧಿ ಕೈಗಳನ್ನು ಹಗ್ಗದಿಂದ ಕಟ್ಟಿಕೊಂಡು ರಸ್ತೆಯಲ್ಲಿ ಬೈಕ್ ಚಲಾಯಿಸುತ್ತಿರುವುದನ್ನು‌ ವಿಡಿಯೋ ಸೆರೆಹಿಡಿದಿದೆ.

ಈ ವಿಲಕ್ಷಣ ಘಟನೆಯನ್ನು ಕಾರಿನೊಳಗಿದ್ದ ಪ್ರಯಾಣಿಕರೊಬ್ಬರು ಬೈಕ್ ಪಕ್ಕದಲ್ಲೇ ಚಲಾಯಿಸಿಕೊಂಡು ಹೋಗುತ್ತಿರುವುದನ್ನು ದಾಖಲಿಸಿದ್ದಾರೆ. ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದ್ದಂತೆ, ಹಲವು ನೆಟಿಜನ್‌ಗಳು ಪ್ರತಿಕ್ರಿಯಿಸಿದ್ದು “ಇದರಲ್ಲಿ ಏನು ಸಮಸ್ಯೆ ?” ಎಂದು ಪ್ರಶ್ನಿಸಿದರೆ ಇನ್ನು ಕೆಲವರು ಖೈದಿಯ ಕೈಯಲ್ಲಿ ಸವಾರಿ ಮಾಡಿಸಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಬೈಕಿನಲ್ಲಿ ಕುಳಿತಿರುವ ಪೊಲೀಸನನ್ನು ಮೈನ್‌ಪುರಿಯ ಭೋಂಗಾವ್ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಎಂದು ಗುರುತಿಸಲಾಗಿದೆ. ಕ್ರಿಮಿನಲ್ ಬೈಕ್ ಚಲಾಯಿಸಿದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಆದರೆ ಮೈನ್‌ಪುರಿ ಪೊಲೀಸರು ಎಕ್ಸ್‌ನಲ್ಲಿ “ಸಂಬಂಧಿಸಿದ ವ್ಯಕ್ತಿಯನ್ನು ತನಿಖೆ ಮಾಡಲು ಮತ್ತು ಅಗತ್ಯ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ” ಎಂದು ಬರೆದಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read