ರೋಬೋಟ್ ನಾಯಿ – ಡ್ರೋನ್ ನಡುವೆ ಯುದ್ಧ: ಭವಿಷ್ಯದ ಚಿತ್ರಣ ನೀಡಿತಾ ವಿಡಿಯೋ ?

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಒಂದು ವಿಡಿಯೋ ಜನರನ್ನು ಅಚ್ಚರಿಯ ಜೊತೆಗೆ ಭವಿಷ್ಯದ ಬಗ್ಗೆ ಆತಂಕಗೊಳ್ಳುವಂತೆ ಮಾಡಿದೆ. ಈ ವಿಡಿಯೋದಲ್ಲಿ ಒಂದು ರೋಬೋಟ್ ನಾಯಿ ಮತ್ತು ಒಂದು ಡ್ರೋನ್ ಪರಸ್ಪರ ಯುದ್ಧ ಮಾಡುತ್ತಿರುವುದು ಕಂಡುಬಂದಿದೆ. ಈ ಎರಡೂ ಯಂತ್ರಗಳು ಬೆಂಕಿಯನ್ನು ಹೊರಸೂಸುತ್ತಿದ್ದು, ಭವಿಷ್ಯದ ಯುದ್ಧದ ಒಂದು ಚಿತ್ರಣವನ್ನು ತೋರಿಸುತ್ತದೆ.

ಈ ವಿಡಿಯೋವನ್ನು ನೋಡಿದ ನಂತರ ಅನೇಕ ಜನರು ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಕೆಲವರು ಇದು ಯಂತ್ರಗಳ ನಡುವಿನ ಮೊದಲ ಯುದ್ಧ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಭವಿಷ್ಯದಲ್ಲಿ ಯುದ್ಧಗಳು ಹೀಗೆಯೇ ನಡೆಯಲಿವೆ ಎಂದು ಹೇಳಿದ್ದಾರೆ.

ತಂತ್ರಜ್ಞಾನ ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂಬುದನ್ನು ಈ ವಿಡಿಯೋ ತೋರಿಸುತ್ತದೆ ಎಂದಿರುವ ಕೆಲವರು ಕೆಲವೇ ವರ್ಷಗಳ ಹಿಂದೆ ಇಂಥದ್ದೊಂದು ವಿಡಿಯೋ ಕಲ್ಪನೆಯಲ್ಲಿಯೂ ಇರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯಂತ್ರಗಳನ್ನು ಯುದ್ಧಕ್ಕೆ ಬಳಸುವುದು ಸರಿಯೇ ? ಯಂತ್ರಗಳು ಸ್ವತಃ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸುರಕ್ಷಿತವೇ ? ಇಂಥ ಹಲವು ನೈತಿಕ ಪ್ರಶ್ನೆಗಳನ್ನು ಈ ವಿಡಿಯೋ ಹುಟ್ಟುಹಾಕಿದೆ.

ಭವಿಷ್ಯದಲ್ಲಿ ಯುದ್ಧಗಳು ಮಾನವರ ನಡುವೆ ನಡೆಯುವುದರ ಜೊತೆಗೆ ಯಂತ್ರಗಳ ನಡುವೆ ನಡೆಯಬಹುದು ಎಂಬ ಆತಂಕವನ್ನು ಈ ವಿಡಿಯೋ ಹೆಚ್ಚಿಸಿದೆ. ಹೀಗಾಗಿ ಯಂತ್ರಗಳನ್ನು ಯುದ್ಧಕ್ಕೆ ಬಳಸುವುದನ್ನು ನಿಯಂತ್ರಿಸುವಂತಹ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಬೇಕು ಎಂದು ಕೆಲವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ಈ ವಿಡಿಯೋದ ಸತ್ಯಾಸತ್ಯತೆಯನ್ನು ಇನ್ನೂ ಸಂಪೂರ್ಣವಾಗಿ ಖಚಿತಪಡಿಸಲಾಗಿಲ್ಲ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read