ವೆಂಕಿ ಕುಡುಮುಲ ನಿರ್ದೇಶನದ ನಿತಿನ್ ಹಾಗೂ ಶ್ರೀಲೀಲಾ ಅಭಿನಯದ ‘ರಾಬಿನ್ ವುಡ್’ ಚಿತ್ರ ಮಾರ್ಚ್ 28ರಂದು ತೆರೆ ಮೇಲೆ ಬರಲಿದೆ. ಈ ಕುರಿತು ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ. ಈ ಸಿನಿಮಾ ಕಳೆದ ವರ್ಷ ಡಿಸೆಂಬರ್ 25 ರಂದು ಬಿಡುಗಡೆಯಾಗಬೇಕಿತ್ತು, ಕಾರಣಾಂತರದಿಂದ ಪೋಸ್ಟ್ ಫೋನ್ ಮಾಡಿದ್ದ ಚಿತ್ರ ತಂಡ ಇದೀಗ ಹೊಸ ದಿನಾಂಕವನ್ನು ಅನೌನ್ಸ್ ಮಾಡಿದೆ.
ಆಕ್ಷನ್ ಎಂಟರ್ಟೈನರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ನಲ್ಲಿ ನವೀನ್ ಯೆರ್ನೇನಿ ಮತ್ತು ವೈ ರವಿ ಶಂಕರ್ ನಿರ್ಮಾಣ ಮಾಡಿದ್ದು, ಜಿ .ವಿ ಪ್ರಕಾಶ್ ಸಂಗೀತ ಸಂಯೋಜನೆ ನೀಡಿದ್ದಾರೆ. ಕೋಟಿ ಸಂಕಲನ, ರಾಮ್ ಕುಮಾರ್ ಕಲಾ ನಿರ್ದೇಶನ, ಸಾಯಿ ಶ್ರೀರಾಮ್ ಛಾಯಾಗ್ರಹಣವಿದೆ.