SHOCKING : ಕುತ್ತಿಗೆಗೆ ಹಗ್ಗ ಹಾಕಿ ಹೆದ್ದಾರಿಯಲ್ಲಿ ದರೋಡೆ : ಬೆಂಗಳೂರಿನ ‘BMS’ ಕಾಲೇಜಿನ ಮೂವರು ವಿದ್ಯಾರ್ಥಿಗಳು ಅರೆಸ್ಟ್.!

ಮಂಡ್ಯ : ಹೆದ್ದಾರಿಯಲ್ಲಿ ದರೋಡೆ ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಬೆಂಗಳೂರಿನ ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.

ಮಂಡ್ಯ ಪೊಲೀಸರು ಮೂವರು ದರೋಡೆಕೋರರನ್ನು ಬಂಧಿಸಿದ್ದು, ಹಣ ಮಾಡುವ ಉದ್ದೇಶದಿಂದ ವಿದ್ಯಾರ್ಥಿಗಳು ರಾಬರಿಗೆ ಇಳಿದಿದ್ದರು.ಬಂ‍ಧಿತರನ್ನ ಕಿರಣ್, ಕುಶಾಲ್ ಬಾಬು, ಗೋಕುಲ್ ಎಂದು ಗುರುತಿಸಲಾಗಿದೆ.

ಸಾರ್ವಜನಿಕರ ಕುತ್ತಿಗೆಗೆ ಹಗ್ಗ ಹಾಕಿ ಅವರನ್ನು ಹೆದರಿಸಿ ಅವರ ಬಳಿ ಇರುವ ಚಿನ್ನ, ಹಣ ಎಗರಿಸಿ ಪರಾರಿಯಾಗುತ್ತಿದ್ದರು.

ಬ್ಯಸಿನೆಸ್ ನೆಪದಲ್ಲಿ ಒಂದಾಗಿದ್ದ ಮೂವರು ದರೋಡೆ ಮಾಡಲು ಹೊರ ರಾಜ್ಯದ ಕಾರು ಬಾಡಿಗೆಗೆ ಪಡೆದಿದ್ದರು.
ಕೆಂಗೇರಿ ಬಸ್ ನಿಲ್ದಾಣದ ಬಳಿ ಬಸ್ ಕಾಯವವರು ಇವರ ಟಾರ್ಗೆಟ್ ಆಗಿದ್ದರು. ಡ್ರಾಪ್ ಕೊಡುವುದಾಗಿ ಹೇಳಿ ಅವರನ್ನು ಕಾರಿಗೆ ಹತ್ತಿಸಿಕೊಂಡು ಹೋಗುತ್ತಿದ್ದರು. ಮಂಡ್ಯ ಬರುತ್ತಿದ್ದಂತೆ ಅವರ ಕುತ್ತಿಗೆಗೆ ಹಗ್ಗ ಹಾಕಿ ಅವರನ್ನ ಬೆದರಿಸಿ ಅವರ ಬಳಿ ಇರುವ ಚಿನ್ನ, ಹಣ ಎಗರಿಸಿ ಪರಾರಿಯಾಗುತ್ತಿದ್ದರು. ಬಂದ ಹಣದಿಂದ ಐಷಾರಾಮಿ ಜೀವನ ನಡೆಸುತ್ತಿದ್ದರು. ಸದ್ಯ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read